Tuesday, October 6, 2026

BDA Apartments

Mysore Dasara BDA JK_Adv BDA Adv
Home Front Page ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ : ಸಚಿವ ಎಸ್.ಟಿ. ಸೋಮಶೇಖರ್ ಟೀಕೆ 

ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ : ಸಚಿವ ಎಸ್.ಟಿ. ಸೋಮಶೇಖರ್ ಟೀಕೆ 

ಮೈಸೂರು,ನವೆಂಬರ್,01,2020(www.justkannada.in) : ಸಿದ್ದರಾಮಯ್ಯ ಏನೂ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಆರ್ ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅಭಿವೃದ್ಧಿ ಮಾಡಿದ್ದಾರೆ. ಆರ್.ಆರ್.ನಗರದಲ್ಲಿ 100 ಪರ್ಸೆಂಟ್ ಮುನಿರತ್ನ ಗೆಲುತ್ತಾರೆ ಎಂದು  ಸಚಿವ ಎಸ್.ಟಿ. ಸೋಮಶೇಖರ್ ಎಂದರು.jk-logo-justkannada-logo

ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ. ಹೀಗಾಗಿ, ಅಭಿವೃದ್ಧಿ ಹಣ ಬಿಡುಗಡೆಯಾಗಿದೆ. ಬಜೆಟ್ ನಲ್ಲಿ ಕೊಟ್ಟ ಹಣವನ್ನು ಮುನಿರತ್ನ ಸರಿಯಾಗಿ ಅವರ ಕ್ಷೇತ್ರಕ್ಕೆ ಬಳಸಿದ್ದಾರೆ. ಕಾಂಗ್ರೆಸ್ ನವರು ಲಾಕ್ ಡೌನ್ ಸಮಯದಲ್ಲಿ ಒಂದು ಗ್ಲಾಸ್ ನೀರು ಸಹ ಕೊಟ್ಟಿಲ್ಲ. ನಮ್ಮನ್ನು ಸಿದ್ದರಾಮಯ್ಯ ಬೆಳೆಸಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ

ನಾವು ಮೊದಲಿನಿಂದ ಕಾಂಗ್ರೆಸ್ ನಲ್ಲಿದ್ದಿವಿ ಸಿದ್ದರಾಮಯ್ಯ ಕೊನೆಯಲ್ಲಿ ಸೇರಿದ್ದು. ನಾವೇನೂ ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ನಾವೇನೂ ಅವರ ಮೇಲೆ ಮುನಿಸಿ ಕೊಂಡು ಪಕ್ಷ ಬಿಟ್ಟಿಲ್ಲ. ಆಗ ಸಮಸ್ಯೆ ಬಗೆಹರಿಸೋದು ಬಿಟ್ಟು ಈಗ ಒದ್ದಾಡಿದರೆ ಏನೂ ಪ್ರಯೋಜನ ಹೇಳಿ ಎಂದು ಟೀಕಿಸಿದ್ದಾರೆ.

key words : Siddaramaiah’s-home-not-funded-development-Minister S.T.Somashekhar-Criticism