Sunday, August 16, 2026

BDA Apartments

Home Front Page ರಾಹುಲ್ ಗಾಂಧಿ ಜನ್ಮ ದಿನಕ್ಕೆ ಸಿದ್ದರಾಮಯ್ಯ ಮಾಡಿದ ‘ಸ್ಪೆಷಲ್’ ಟ್ವೀಟ್

ರಾಹುಲ್ ಗಾಂಧಿ ಜನ್ಮ ದಿನಕ್ಕೆ ಸಿದ್ದರಾಮಯ್ಯ ಮಾಡಿದ ‘ಸ್ಪೆಷಲ್’ ಟ್ವೀಟ್

ಬೆಂಗಳೂರು, ಜೂನ್ 19, 2021 (www.justkannada.in): ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ಜನ್ಮದಿನ ಇಂದು. ಹೀಗಾಗಿ ಗಣ್ಯರಿಂದ ಹಾರೈಕೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಾರೈಕೆ ವಿಶೇಷವಾಗಿದೆ.

ನಿಮ್ಮ ಹೋರಾಟದ ಹಾದಿಯಲ್ಲಿ ಸದಾ ಹೆಜ್ಜೆ ಹಾಕುವ ಶಪಥದೊಂದಿಗೆ ನಿಮಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಮಂದಿನ ವರ್ಷ ಸಂತಸದಿಂದ ಕೂಡಿರಲಿ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಶಿ ತರೂರ್, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಗಣ್ಯರು ಟ್ವಿಟ್ಟರ್ ನಲ್ಲಿ ರಾಹುಲ್  ಅವರಿಗೆ ಶುಭ ಹಾರೈಸಿದ್ದಾರೆ.Ayodhya-Before-siddaramayanahundi-Sri Rarma Darshan