ಸಿದ್ಧರಾಮಯ್ಯ ಕಾಲ ಮುಗಿಯಿತು: ಇನ್ನು ಯಾವತ್ತು ಸಿಎಂ ಆಗಲ್ಲ- ಸಚಿವ ಆರ್.ಅಶೋಕ್.

ತುಮಕೂರು,ಜನವರಿ,6,2023(www.justkannada.in):  ಸಿದ್ಧರಾಮಯ್ಯ ಕಾಲ ಮುಗಿಯಿತು. ಸಿದ್ಧರಾಮಯ್ಯ ಇನ್ನು ಯಾವತ್ತೂ ಮುಖ್ಯಮಂತ್ರಿಯಾಗಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದ ಬಿಜೆಪಿ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ  ಸಚಿವ ಆರ್.ಅಶೋಕ್, ಈಗಾಗಲೇ ಸಿದ್ಧರಾಮಯ್ಯಗೆ ಐದು ವರ್ಷ ಅವಕಾಶ ನೀಡಿದ್ದರು. ಆದರೂ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಮತ್ತೆ ಸಿದ್ಧರಾಮಯ್ಯ ಸಿಎಂ ಆಗಲ್ಲ ಎಂದರು.

ರಾಹಲ್ ಗಾಂಧಿ ಕಾಶೀಯಾತ್ರೆ ಮಾಡುತ್ತಿದ್ದಾರೆ. ಮೊದಲು ದೇವಸ್ಥಾನಕ್ಕೆ ಹೋಗ್ತಾ ಇರಲಿಲ್ಲ. ಈಗ ಕಂಡ ಕಂಡ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ ಎಂದು ಸಚಿವ ಆರ್.ಅಶೋಕ್ ಟೀಕಿಸಿದರು.

Key words: Siddaramaiah- time – over- never- be- CM –again- Minister -R. Ashok.