ನೀವು ಹುಲಿ ಎಂದುಕೊಳ್ಳಬೇಡಿ: ಹುಲಿಯನ್ನ ಇಲಿ ಮಾಡುವುದು ರಾಜ್ಯದ ಜನರಿಗೆ ಗೊತ್ತು- ಸಿದ್ಧರಾಮಯ್ಯಗೆ ಸಿಎಂ ಬೊಮ್ಮಾಯಿ ಟಾಂಗ್.

ತುಮಕೂರು,ಜನವರಿ,6,2023(www.justkannada.in): ತಮ್ಮನ್ನ ನಾಯಿಮರಿಗೆ ಹೋಲಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನೀವು ಹುಲಿ ಎಂದುಕೊಳ್ಳಬೇಡಿ: ಹುಲಿಯನ್ನ ಇಲಿ ಮಾಡುವುದು ರಾಜ್ಯದ ಜನರಿಗೆ ಗೊತ್ತು ಎಂದು ಕುಟುಕಿದ್ದಾರೆ.

ತುಮಕೂರು ಶಿರಾದಲ್ಲಿ ನಡೆದ ಬಿಜೆಪಿ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮಷ್ಟಕ್ಕೆ ತಾವೇ ಹುಲಿ ಉಳಿದವರು ನಾಯಿ ಇಲಿ ಅಂತಿದ್ದಾರೆ. ಅಂತಹವರಿಗೆ ರಾಜ್ಯದ ಜನ ತಕ್ಕ ಉತ್ತರ ಕೊಡುತ್ತಾರೆ. ತುಮಕೂರಿನ ಎಲ್ಲಾ ಕ್ಷೇತ್ರಗಳಲ್ಲಿ ಕಮಲ ಅರಳುತ್ತೆ,  ಶಿರಾ ಅಂದರೇ ಸಿಹಿ ಇಲ್ಲಿಂದಲೇ  ರಾಜ್ಯಕ್ಕೆ ಸಿಹಿ ಹಂಚೋಣ ಎಂದರು.

ಬರದನಾಡು ಶಿರಾ ತಾಲ್ಲೂಕಿನಲ್ಲಿ ಕಾಯಕಲ್ಪ ನೀಡಿದ್ದೇವೆ.  ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮಾತು ಕೊಟ್ಟಂತೆ ಮಾದಲೂರು ಕೆರೆಗೆ ನೀರು ತುಂಬಿಸಿದ್ದೇವೆ.  ಭದ್ರಮೇಲ್ದಂಡೆಗೆ ಕೇಂದ್ರ ಸರ್ಕಾರ  ಸಹಾಯ ಮಾಡುತ್ತೆ. ಪ್ರಧಾನಿ ಮೋದಿ ಹಲವು ಯೋಜನೆಗಳನ್ನ ನೀಡಿದ್ದಾರೆ. 6 ಸಾವಿರ ಕಿ. ಮೀ ರಾಷ್ಟ್ರೀಯ ಹೆದ್ದಾರಿ ಘೋಷಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words: Don’t- think -you – tiger-CM -Bommai -Tong – Siddaramaiah.