ಸಿದ್ಧರಾಮಯ್ಯ ಹೇಳಿಕೆ ಅವರ ವ್ಯಕ್ತಿತ್ವ ತೋರಿಸುತ್ತೆ: ಜನರೇ ತಕ್ಕ ಉತ್ತರ ಕೊಡ್ತಾರೆ- ಸಿಎಂ ಬೊಮ್ಮಾಯಿ.

ಬೆಂಗಳೂರು,ಜನವರಿ,4,2023(www.justkannada.in): ನರೇಂದ್ರ ಮೋದಿ ಬಳಿ ನಾಯಿ ಮರಿ ತರ ಇರ್ತಾರೆ ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ,  ಹೇಳೀಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತೆ . ಸಿದ್ದರಾಮಯ್ಯಗೆ ಜನರೇ ತಕ್ಕ ಉತ್ತರ ನೀಡುತ್ತಾರೆ . ನಾಯಿ ನಿಯತ್ತಿನ ಪ್ರಾಣಿ ನಿಯತ್ತಾಗಿ ಕೆಲಸ ಮಾಡುವೆ. ನಿಯತ್ತನ್ನ ಜನರ ಪರವಾಗಿ ಉಳಿಸಿಕೊಂಢು ಹೋಗುವೆ. ಕಾಂಗ್ರೆಸ್ ನಂತೆ ಸಮಾಜ ಒಡೆಯುವ ಕೆಲಸ ಮಾಡಲ್ಲ ಎಂದು ಟಾಂಗ್ ನೀಡಿದರು.

ಪ್ರಧಾನಿ ಮೋದಿ ಕೇಳಿದ್ದದನ್ನು ಕೊಡುವ ಕಾಮದೇನು. ಮನ್ ಮೋಹನ್ ಸಿಂಗ್ ಅತ್ಯಂತ ಸಭ್ಯ ಪ್ರಧಾನಿಯಾಗಿದ್ದರು  ಸಿಂಗ್ ಮುಂದೇಯೇ ಹೆದರಿಕೊಂಡು ಹೋಗಲಿಲ್ಲ.  ಸೌಭಾಗ್ಯ  ಕೊಡ್ತೇವೆ. ದೌರ್ಬಾಗ್ಯ ಕೊಟ್ಟಿಲ್ಲ ಎಂದರು.

Key words: Siddaramaiah- statement –shows-his personality-CM Bommai.