ಸಿದ‍್ಧರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದರೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ- ಮಾಜಿ ಸಚಿವ ಆರ್.ಅಶೋಕ್ ಆಗ್ರಹ.

ಬೆಂಗಳೂರು,ಅಕ್ಟೋಬರ್,16,2023(www.justkannada.in):  ಸಿಎಂ ಸಿದ‍್ಧರಾಮಯ್ಯ ಸಮಾಜವಾದಿ  ಅಂತಾರೆ . ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದರೇ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರಣಿ ಕಲೆಕ್ಷನ್ ಮಾಡುತ್ತಿದೆ. ಸಿಎಂ ಸಿದ್ಧರಾಮಯ್ಯ ಕಲೆಕ್ಷನ್ ಮಾಸ್ಟರ್ ಆಗಿದ್ದಾರೆ ಕೈ ನಾಯಕನ  ಮನೆಯಲ್ಲಿ ಕಂತೆ ಕಂತೆ ನೋಟು ಸಿಕ್ಕಿದೆ. ಆನೆ ಮೇಲೆ ಹೊರವಷ್ಟು ಕೋಟಿ ಕೋಟಿ ಹಣ ಸಿಕ್ಕಿದೆ.  ಆನೆ ಅಂಬಾರಿ ಹೊರಬೇಕಿತ್ತು. ಆದ್ರೆ ದುಡ್ಡು ಹೊರುತ್ತಿದೆ ಎಂದು ವ್ಯಂಗ್ಯವಾಡಿದರು.

ದುಡ್ಡ ನಮ್ಮದಲ್ಲ ನಮ್ಮದಲ್ಲ ಅಂತೀರಾ ಆಗಾದ್ರೆ ಯಾರದ್ದು ಕಾಂಗ್ರೆಸ್ ಸರ್ಕಾರದಿಂದ ತೆಲಂಗಾಣಕ್ಕೆ ದುಡ್ಡು ಹೋಗುತ್ತಿದೆ. ನಾಳೆ  ಕಾಂಗ್ರೆಸ್ ಸರ್ಕಾರದ ವಿರುದ್ಧ  ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಆರ್ ಅಶೋಕ್ ತಿಳಿಸಿದರು.

Key words: Siddaramaiah – socialist –background- resign – post of CM- Former minister- R. Ashok