ನನ್ನ ಮತ್ತು ಸಿದ್ದರಾಮಯ್ಯ ಸಂಬಂಧ ಚೆನ್ನಾಗಿದೆ: ಕೆಲವರಿಂದ ಹುಳಿ ಹಿಂಡುವ ಕೆಲಸ- ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ            

ಮೈಸೂರು,ಡಿಸೆಂಬರ್, 19,2020(www.justkannada.in): ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಸಭೆಗಳಿಗೆ ಹಾಜರಾಗುತ್ತಿಲ್ಲ. ಹೀಗಾಗಿ ಇದಕ್ಕೆ ವಿಶೇಷ ಆರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.Teachers,solve,problems,Government,bound,Minister,R.Ashok

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ನಂಜನಗೂಡು ಉಪಚುನಾವಣೆ ಸಂಧರ್ಭದಲ್ಲಿ ಬೆನ್ನು ನೋವಾಗಿತ್ತು. ಇದಕ್ಕೆ ಅಪರೇಷನ್ ಮಾಡಲಾಗಿದೆ‌. ಜೊತೆಗೆ ಕಣ್ಣಿನ ಸಮಸ್ಯೆ ಇದೆ‌. ಇದರಿಂದ ಜನರ ಬಳಿ ಬಂದರೆ ಇನ್ಪೆಕ್ಷನ್ ಆಗುತ್ತೆ ಎಂಬ ಕಾರಣಕ್ಕೆ ಬಂದಿರಲಿಲ್ಲ. ಇದಕ್ಕೆ ವಿಶೇಷ ಆರ್ಥ ಕಲ್ಪಿಸುವ ಅಗತ್ಯ ಇಲ್ಲ. ನನ್ನ ಸಿದ್ದರಾಮಯ್ಯ ಸಂಬಂಧ ಚೆನ್ನಾಗಿದೆ. ಕೆಲವರು ಹುಳಿ ಹಿಂಡುವ ಕೆಲಸ ಮಾಡುತ್ತಲೇ ಇರುತ್ತಾರೆ‌, ಇದಕ್ಕೆ‌ ತಲೆ ಕೆಡಿಸಿಕೊಳ್ಳುಬಾರದು ಎಂದರು.Siddaramaiah -relationship – good-Former Minister- HC Mahadevappa-mysore

ಕಳೆದ ಚುನಾವಣೆಯಲ್ಲಿ ಸೋತವರು ಗೆದ್ದವರನ್ನ ಕರೆದು ಸಿದ್ದರಾಮಯ್ಯ ಸಭೆ ನಡೆಸಿದರು. ಸರ್ಕಾರದ ಕಾಯ್ದೆಗಳ ಬಗ್ಗೆ ಜನರಿಗೆ ತಿಳಿಸುವುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಹಿಂದಿನ ನಮ್ಮ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸುವಂತೆ ಹೇಳಿದರು‌. ಈ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಚುನಾವಣೆಗೆ ಇನ್ನು ಎರಡು ವರ್ಷಗಳ ಸಮಯ ಇದೆ‌. ಅವರು ಪ್ರಬುದ್ಧರಿದ್ದಾರೆ ಎಲ್ಲಿ ನಿಲ್ಲಬೇಕು ಅಂತ ಅವರು ತೀರ್ಮಾನ ಮಾಡುತ್ತಾರೆ.  ಸದ್ಯಕ್ಕೆ ಈ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೆಚ್.ಸಿ.ಮಹದೇವಪ್ಪ ಹೇಳಿದರು.

Key words: Siddaramaiah -relationship – good-Former Minister- HC Mahadevappa-mysore