ಕೋಲಾರ,ಜನವರಿ,9,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸುವ ನಿರ್ಧಾರವನ್ನ ಬಿಜೆಪಿ ಮುಖಂಡ ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ವಾಗತಿಸಿದರು.
ಈ ಕುರಿತು ಮಾತನಾಡಿದ ವರ್ತೂರು ಪ್ರಕಾಶ್, ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ ಸ್ವಾಗತ. ಸಿದ್ಧರಾಮಯ್ಯ ಅವರದ್ದು ತಪ್ಪು ತೀರ್ಮಾನ. ಸಿದ್ದರಾಮಯ್ಯ ನನ್ನ ಗುರುವಲ್ಲ ಕೋಲಾರದಲ್ಲೇ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯವಾಗುತ್ತದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ನಲ್ಲೇ ಅವರ ವಿರೋಧಿಗಳಿದ್ದಾರೆ. ಸಿದ್ಧರಾಮಯ್ಯ ಅಹಿಂದ ನಾಯಕನೇ ಅಲ್ಲ . ಅದೃಷ್ಟದ ನಾಯಕ . ಸಿದ್ದು ಕುರುಬರ ಲೀಡರ್ ಅಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದರು.
Key words: Siddaramaiah -ends -politics – Kolar-Varthur Prakash






