ಗಾಂಧಿ ಮತ್ತು ಕಾಂಗ್ರೆಸ್ ಟೀಕಿಸುತ್ತಿದ್ದ ಸಿದ್ಧರಾಮಯ್ಯ ಈಗ ಆತ್ಮಾವಲೋಕನ ಮಾಡಿಕೊಳ್ಳಲಿ- ಕೇಂದ್ರ ಸಚಿವ ಸುರೇಶ್ ಅಂಗಡಿ ಟಾಂಗ್..

ಬೆಳಗಾವಿ,ಅ,29,2019(www.justkannada.in): ಇವತ್ತಿನ ಕಾಂಗ್ರೆಸ್ ನಿಜವಾದ ಕಾಂಗ್ರೆಸ್ ಅಲ್ಲ. ಈಗ ಇರುವುದು ಹಳೇ ಕಾಂಗ್ರೆಸ್ ಅಲ್ಲ, ಇಟಾಲಿಯನ್ ಕಾಂಗ್ರೆಸ್. ಗಾಂಧಿ ಮತ್ತು ಕಾಂಗ್ರೆಸ್ ಟೀಕಿಸುತ್ತಿದ್ದ ಸಿದ್ಧರಾಮಯ್ಯ ಈಗ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ವ್ಯಂಗ್ಯವಾಡಿದರು.

ಇಂದು ಮಾಧ್ಯಮದ ಜತೆ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜಕಾರಣದಲ್ಲಿ ಯಾರು ಸ್ನೇಹಿತರು ಅಲ್ಲ, ಯಾರು ವೈರಿಗಳು ಅಲ್ಲ. ಈಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿರಬಹುದು. ಆದರೆ ಒಂದು ಕಾಲದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿ ಬಂದವರು . ಆಗ ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ ನ್ನ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದರು. ನಂತರ ಅವರು ಸೇರಿದ್ದು ಸೋನಿಯಾ ಗಾಂಧಿ ಅವರ ಇಟಾಲಿಯನ್ ಕಾಂಗ್ರೆಸ್‍ಗೆ. ಸಿದ್ದರಾಮಯ್ಯ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಸಿಎಂ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ ಜಾತಿ ರಾಜಕಾರಣಿಗಳಲ್ಲ. ಕೆಲವರು ಜಾತಿ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಜನ ಬುದ್ದಿವಂತರಾಗಿದ್ದಾರೆ ಜಾತಿ ನೋಡಿ ಯಾರು ಮರಳಾಗುತ್ತಿಲ್ಲ. ಜಾತಿ ಅನ್ನುವುದು ಹೋಗಿ ದೇಶ ಮೊದಲು ಅಂತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಸುರೇಶ್ ಅಂಗಡಿ ವಾಗ್ದಾಳಿ ನಡೆಸಿದರು.

Key words: Siddaramaiah – criticize -Gandhi – Congress-Union Minister -Suresh angadi