ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜಿ ಮಾಡದಿದ್ರೆ ರಾಜಕೀಯ ನಿವೃತ್ತಿ- ಡಿ.ಕೆ ಶಿವಕುಮಾರ್ ಗೆ ಅನರ್ಹ ಶಾಸಕ ಡಾ. ಸುಧಾಕರ್ ತಿರುಗೇಟು…

ಚಿಕ್ಕಬಳ್ಳಾಪುರ,ಅ,29,2019(www.justkannada.in):  ನನ್ನ ಪ್ರಾಣ ಹೋದರೂ ಸರಿ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರವಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಅನರ್ಹ ಶಾಸಕ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಮಾಡುವುದು ಶತಸಿದ್ಧ . ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗದಿದ್ದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ  ಅನರ್ಹ ಶಾಸಕ ಡಾ.ಸುಧಾಕರ್ ಘೋಷಿಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಾ.ಸುಧಾಕರ್, ಕನಕಪುರವನ್ನು ಕರ್ನಾಟಕ ಎಂದುಕೊಂಡಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಪ್ರತಿ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಆಗಬೇಕೆಂದು ನಿಯಮವಾಗಿತ್ತು. ಈಗಾಗಲೇ ರಾಮನಗರದಲ್ಲಿ ಒಂದು ಕಾಲೇಜು ಇದೆ. ಡಿಕೆಶಿ ಅವರು ಕೇವಲ ಕನಕಪುರಕ್ಕೆ ಮಾತ್ರ ಮಂತ್ರಿಯಾಗಿರಲಿಲ್ಲ. ಅವರು ರಾಜ್ಯದ ಮಂತ್ರಿಯಾಗಿದ್ದರು. ಅವರ ಧೋರಣೆ ಸರಿಯಲ್ಲ ಎಂದು ಕಿಡಿಕಾರಿದರು.

 ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಕ್ಕೆ  ಡಿ.ಕೆ.ಶಿವಕುಮಾರ್ ವಿರುದ್ಧ  ಹರಿಹಾಯ ಸುಧಾಕರ್, ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಲು ಡಿಕೆಶಿ ಯಾರು..? ಡಿಕೆಶಿ ನನ್ನ ಹಿರಿಯಣ್ಣನಲ್ಲ, ಡಿಕೆಶಿ ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತದೆ. ನೇಣು ಹಾಕುವುದು, ಹಾಕಿಸುವುದು, ಸಾಯಿಸುವುದು, ಹೊಡಿ, ಬಡಿ, ಕಡಿ ಇದೆಲ್ಲ ಡಿಕೆಶಿ ಸಂಸ್ಕೃತಿ’. ನನಗೆ ಉತ್ತಮ ಸಂಸ್ಕೃತಿ, ಸಾಮಾಜಿಕ ಕಳಕಳಿ ಇದೆ ಎಂದು ಟಾಂಗ್ ನೀಡಿದರು.

Key words: medical college –Chikkaballapur-political  retirement –disqualified MLA-sudhakar