Saturday, August 22, 2026

BDA Apartments

Home Front Page ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ: ನಿವೃತ್ತಿ ತೆಗೆದುಕೊಳ್ಳಲೆಂದು ಬಯಸಲ್ಲ- ಸಚಿವ ಶಿವರಾಜ್ ತಂಗಡಗಿ.

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ: ನಿವೃತ್ತಿ ತೆಗೆದುಕೊಳ್ಳಲೆಂದು ಬಯಸಲ್ಲ- ಸಚಿವ ಶಿವರಾಜ್ ತಂಗಡಗಿ.

ಕೊಪ್ಪಳ, ಏಪ್ರಿಲ್, 3,2024 (www.justkannada.in): ಲೋಕಸಭೆ ಚುನಾವಣೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ ಎಂಬ  ಹೇಳಿಕೆಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಶಿವರಾಜ್ ತಂಗಡಗಿ, ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಅವರು ನಿವೃತ್ತಿ ತೆಗೆದುಕೊಳ್ಳಲೆಂದು ಬಯಸಲ್ಲ ಎಂದು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಗ್ಯಾರಂಟಿ ಯೋಜನೆ ಮುಂದುವರೆಯುತ್ತೆ ಯಾವುದೇ ಅನುಮಾನ ಬೇಡ. ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ . ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ. ಧಾರ್ಮಿಕ ಸ್ಥಳದಲ್ಲಿ ಮೋದಿ ಮೋದಿ ಎಂದು ಹೇಳಿದ್ದು ಸರಿಯಲ್ಲ. ಈ ಬಾರಿ ದೇವರೇ ಬಿಜೆಪಿಗೆ ಪಾಠ ಕಲಿಸುತ್ತಾನೆ ಎಂದರು.

ಸಿದ್ದರಾಮಯ್ಯ ಬದ್ಧತೆ ಇರುವ ನಾಯಕ. ಸಿದ್ದರಾಮಯ್ಯ ನಿವೃತ್ತಿ ತೆಗೆದುಕೊಳ್ಳಬೇಕೆಂದು ಬಯಸಲ್ಲ. ಇನ್ನು ಕಾಂಗ್ರೆಸ್ ದೊಡ್ಡ ಪಕ್ಷ ಸಮಸ್ಯೆಗಳಿರುವುದು ಸಹಜ. ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಮನೆಯ ಸಮಸ್ಯೆಯನ್ನ ಬಗೆಹರಿಸಿಕೊಳ್ಳುತ್ತೇವೆ  ಎಂದರು.

Key words: Siddaramaiah, continue, CM, Shivaraj Tangadagi.