Sunday, August 9, 2026

BDA Apartments

Home Front Page ಕಾಂಗ್ರೆಸ್ ನಿಂದ ಡರ್ಟಿ ಪಾಲಿಟಿಕ್ಸ್ ಎಂದ ಸಿಎಂ ಬೊಮ್ಮಾಯಿಗೆ ಸಿದ್ಧರಾಮಯ್ಯ ತಿರುಗೇಟು.

ಕಾಂಗ್ರೆಸ್ ನಿಂದ ಡರ್ಟಿ ಪಾಲಿಟಿಕ್ಸ್ ಎಂದ ಸಿಎಂ ಬೊಮ್ಮಾಯಿಗೆ ಸಿದ್ಧರಾಮಯ್ಯ ತಿರುಗೇಟು.

ಬೆಂಗಳೂರು,ಸೆಪ್ಟಂಬರ್,26,2022(www.justkannada.in): ಭ್ರಷ್ಟಾಚಾರ ಆರೋಪ ಮಾಡಿದ ಕಾಂಗ್ರೆಸ್ ನಾಯಕರಿಗೆ ಡರ್ಟಿ ಪಾಲಿಟಿಕ್ಸ್ ಎಂದು ಟೀಕಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾವು ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜಪಿಯವರು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ.  ಡರ್ಟಿ ಪಾಲಿಟಿಕ್ಸ್ ಮಾಡುವುದು ಬಿಜೆಪಿಯವರು.

ಗಾಂಧಿ ಕೊಂದವರನ್ನ ಬಿಜೆಪಿಯವರು ಆರಾಧನೆ ಮಾಡುತ್ತಾರೆ.  ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ.  ಭ್ರಷ್ಟಾಚಾರ ಮಾಡುತ್ತಿದ್ದೀರಿ ಅಂತಾ ಹೇಳಿದವು.  ಅದು ಡರ್ಟಿ ಪಾಲಿಟಿಕ್ಸಾ..? ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: Siddaramaiah – CM Bommai – dirty politics – Congress.