Sunday, August 9, 2026

BDA Apartments

Home Front Page ಸಿದ್ಧರಾಮಯ್ಯ ಪಂಜರದ ಗಿಳಿ: ಅವರ ಕೈಯಲ್ಲಿಅಧಿಕಾರ ಇಲ್ಲ- ಕೇಂದ್ರ ಸಚಿವ ವಿ.ಸೋಮಣ್ಣ

ಸಿದ್ಧರಾಮಯ್ಯ ಪಂಜರದ ಗಿಳಿ: ಅವರ ಕೈಯಲ್ಲಿಅಧಿಕಾರ ಇಲ್ಲ- ಕೇಂದ್ರ ಸಚಿವ ವಿ.ಸೋಮಣ್ಣ

ಚನ್ನಪಟ್ಟಣ,ನವೆಂಬರ್,4,2024 (www.justkannada.in): ಸಿಎಂ ಸಿದ್ದರಾಮಯ್ಯ ಪಂಜರದ ಗಿಳಿಯಾಗಿದ್ದಾರೆ. ಅವರ ಕೈಯಲ್ಲಿಅಧಿಕಾರ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದರು.

ಇಂದು ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ,  ಸಿಎಂ ಸಿದ್ದರಾಮಯ್ಯ ಪಂಜರದ ಗಿಳಿಯಾಗಿದ್ದಾರೆ. ಯಾರು ಅಧಿಕಾರ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗುತ್ತೆ ಎಂದರು.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪ್ರಚಾರ ಕಾರ್ಯಕ್ರಮ ಮುಂದೂಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ,  ಇಲ್ಲಿರುವ ಪ್ರತಿಯೊಬ್ಬರೂ ದೇವೇಗೌಡರೇ. ಈ ಭಾಗದ ಪ್ರತಿಮನೆಯಲ್ಲೂ ಒಬ್ಬೊಬ್ಬ ದೇವೇಗೌಡರು ಇದ್ದಾರೆ.  ದೇವೇಗೌಡ ಅವರ ಆರೋಗ್ಯ ಮುಖ್ಯ. ಅವರು ಯಾವಾಗ ಬಂದರೂ ಸರಿ. ಜನರು ಅವರ ಮಾಡಿರುವ ಕೆಲಸಗಳಿಗೆ ಮತ ಹಾಕುತ್ತಾರೆ ಎಂದರು.

Key words: Siddaramaiah, caged, parrot, Union Minister, V. Somanna