Sunday, August 9, 2026

BDA Apartments

Home Front Page ಪ್ರತಾಪ್ ಸಿಂಹ ಮಹಾನ್ ಕೋಮುವಾದಿ- ಸಿಎಂ ಸಿದ್ದರಾಮಯ್ಯ ತಿರುಗೇಟು

ಪ್ರತಾಪ್ ಸಿಂಹ ಮಹಾನ್ ಕೋಮುವಾದಿ- ಸಿಎಂ ಸಿದ್ದರಾಮಯ್ಯ ತಿರುಗೇಟು

ಹುಬ್ಬಳ್ಳಿ,ನವೆಂಬರ್,4,2024 (www.justkannada.in): ಸಿಎಂ  ಸಂಪೂರ್ಣವಾಗಿ ಮುಸ್ಲೀಂ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಒಬ್ಬ ಮಹಾನ್ ಕೋಮುವಾದಿ . ಕೋಮುವಾದಿಗಳಿಂದ ಮತ್ತೆ ಏನನ್ನು ನಿರೀಕ್ಷಿಸಲು ಸಾಧ್ಯ. ಸಂವಿಧಾನದ ಬಗ್ಗೆ ಗೌರವವಿಲ್ಲ. ಕೋಮುವಾದವೇ ಅವರ ಕಸುಬು. ಜಾತಿ ಕೋಮುವಾದ ಮಾಡಿ ರಾಜಕೀಯದಲ್ಲಿ ಇರಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಯಾವಾಗಲೂ ಸುಳ್ಳು ಆರೋಪ ಮಾಡುತ್ತಾರೆ. ಬಿಜೆಪಿ ಯಾವತ್ತೂ ಸಮಸ್ಯೆ ವಿಚಾರಕ್ಕೆ ಹೋರಾಟ ಮಾಡಲ್ಲ. ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡೋದು ಅವರ ಕೆಲಸ.  ಬೊಮ್ಮಾಯಿ  ಭೂಮಿ ಒತ್ತುವರಿ ಮಾಡುತ್ತೇವೆ ಎಂದರು . ಈಗ ಯಾಕೆ ವಿರೋಧಿಸುತ್ತಿದ್ದಾರೆ?   ವಕ್ಫ್  ಆಸ್ತಿ ವಿವಾದ ನಿನ್ನೆ ಮೊನ್ನೆಯದಲ್ಲ ಬಿಜೆಪಿಅವಧಿಯಲ್ಲೂ ನೋಟಿಸ್ ನೀಡಲಾಗಿದೆ. ನಮ್ಮ  ಅವಧಿಯಲ್ಲೂ ನೊಟಿಸ್ ನೀಡಲಾಗಿದೆ. ನೋಟಿಸ್ ವಾಪಸ್ ಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

Key words: Prathap Simha, communalist, CM Siddaramaiah