ಹೃದಯಾಘಾತದಿಂದ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ನಿಧನ

ತುಮಕೂರು,ಅಕ್ಟೊಂಬರ್,04,2020(www.justkannada.in) : ತುಮಕೂರು ಜಿಲ್ಲೆಯ ಗೋಡೇಕೆರೆ ಮಠದ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ(65) ಭಾನುವಾರ ಹೃದಯಾಘಾತದಿಂದ ಮಠದಲ್ಲಿಯೇ ನಿಧನರಾಗಿದ್ದಾರೆ.jk-logo-justkannada-logoತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಶಾಖಾ ಮಠದಲ್ಲಿ ರಂಭಾಪುರಿ ವಿದ್ಯಾಸಂಸ್ಥೇಯನ್ನು ಸ್ವಾಮೀಜಿ ಮುನ್ನಡೆಸುತ್ತಿದ್ದರು. ಸ್ವಾಮೀಜಿ ಅವರು 1965ರಲ್ಲಿ ಮಠದ ಅಧ್ಯಕ್ಷತೆ ವಹಿಸಿಕೊಂಡರು. ನಾಳೆ ಕ್ರಿಯಾ ಸಮಾಧಿ ನಡೆಯಲಿದೆ ಎಂದು ತಿಳಿದು ಬಂದಿದೆ.

Siddarama-Deshree-Kendra-Swamiji-dies-heart-attack

ಗೋಡೆಕೆರೆಯಲ್ಲಿ ಸಿದ್ದರಾಮೇಶ್ವರರ ತೋರುಗದ್ದುಗೆ(ತಪೋನುಷ್ಠಾನ ಮಾಡಿದ ಸ್ಥಳ) ಇದ್ದು ಈ ಗದ್ದುಗೆಯೇ ಮಠವಾಗಿ ಪ್ರವರ್ಧಮಾನಕ್ಕೆ ಬಂದಿತ್ತು. ತೋರು ಗದ್ದುಗೆಯ ಕಾರಣದಿಂದ ಜಿಲ್ಲೆಯ ಪ್ರಮುಖ ಮಠವಾಗಿಯೂ ಇದು ಗುರುತಿಸಿಕೊಂಡಿತ್ತು.

key words : Siddarama-Deshree-Kendra-Swamiji-dies-heart-attack