ರಿವಾಲ್ವರ್ ತೋರಿಸಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬೆಂಗಳೂರು,ಮೇ,23,2022(www.justkannada.in):  ರಿವಾಲ್ವರ್ ತೋರಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ಟೈಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದ. ಸಂತ್ರಸ್ತ ಯುವತಿ ಉದ್ಯಮಿಯ ಒಡೆತನದ ಪಿಜಿಯಲ್ಲಿಯೇ ವಾಸವಾಗಿದ್ದಳು. ಈ ನಡುವೆ ಯುವತಿಗೆ  ರಿವಾಲ್ವರ್  ತೋರಿಸಿ ಅನಿಲ್ ರವಿ ಶಂಕರ್ ಪ್ರಸಾದ್ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.ganja peddlers arrested by mysore police

ಇದೀಗ ಆರೋಪಿಯನ್ನು ಬಂಧಿಸಿ, ರಿವಾಲ್ವರ್ ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

Key words: Show -revolver- rape – young woman-accused-arrest