ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾದರೂ ಅಚ್ಚರಿ ಪಡಬೇಕಿಲ್ಲ- ಶಾಸಕ ಲಕ್ಷ್ಮಣ್ ಸವದಿ.

ಬೆಳಗಾವಿ,ಸೆಪ್ಟಂಬರ್,30,2023(www.justkannada.in): ಲೋಕಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾದರೂ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಚುನಾವಣೆ ವೇಳೆಗೆ JDS ಬಿಜೆಪಿಯಲ್ಲಿ ವಿಲೀನವಾದರೂ ಅಚ್ಚರಿಪಡಬೇಕಿಲ್ಲ. ಆದರೆ ಇದಕ್ಕೆ ಜೆಡಿಎಸ್​ ವರಿಷ್ಠ ದೇವೇಗೌಡರು ಒಪ್ಪಿಗೆ ಇಲ್ಲ. ಹೀಗಾಗಿ ಚುನಾವಣೆಗೆ ಮಾತ್ರ ಜೆಡಿಎಸ್​​-ಬಿಜೆಪಿ ಮೈತ್ರಿ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್​​ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಬಹುದು. ಕುಮಾರಸ್ವಾಮಿ, ಜೆಡಿಎಸ್​​ ನಾಯಕರು ಬಿಜೆಪಿಯಲ್ಲಿ ವಿಲೀನವಾಗಬಹುದು ಎಂದು ಲೇವಡಿ ಮಾಡಿದರು.

ಎರಡು ಬಾರಿ ಸಿಎಂ ಆಗಿ ಅವರು ತಮ್ಮ ರಾಜಕೀಯದಲ್ಲಿ ಉನ್ನತ ಮಟ್ಟಿಗೆ ಹೋಗಿ ಬಂದಿದ್ದಾರೆ. ಅದಕ್ಕೆ ದೈವಬಲ, ಅವರ ತಂದೆಯ ಆಶೀರ್ವಾದ, ಅವರ ಪರಿಶ್ರಮ ಇರಬಹುದು. ಎರಡು ಬಾರಿ ಸಿಎಂ ಆದ ಮೇಲೂ ಅವರಿಗೆ ಸ್ವಾಭಿಮಾನ ಇರಬೇಕಿತ್ತು. ಯಾರು ಇವರನ್ನು ಉಳಿಸಬೇಕು ಅಂತಿದ್ದರೂ ಅವರ ಬಗ್ಗೆ ಟೀಕೆ, ಯಾರೂ ಇವರನ್ನು ಇಳಿಸಿದರೂ ಅವರ ಜೊತೆ ದೋಸ್ತಿ. ಬಿಎಸ್​ ಯಡಿಯೂರಪ್ಪನವರು ಜೈಲಿಗೆ ಹೋಗಲು ಕುಮಾರಸ್ವಾಮಿ ಅವರೇ ಕಾರಣ. ಅದೇ ಯಡಿಯೂರಪ್ಪ ಇಂದು ಕುಮಾರಣ್ಣರನನ್ನು ತಬ್ಬಿಕೊಂಡು ಪಕ್ಕಕ್ಕಿಟ್ಟುಕೊಂಡಿದ್ದಾರೆ ಎಂದು ಟಾಂಗ್ ನೀಡಿದರು.

Key words: Should not – surprised – JDS- merges –with- BJP – MLA -Laxman Savadi.