ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರೆತೆಯಿಲ್ಲ : ಮೈತ್ರಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಏನಂದ್ರು…?

ಬೆಂಗಳೂರು,ಸೆಪ್ಟೆಂಬರ್,30,2020(www.justkannada.in) : ಶಿರಾ ಮತ್ತು ಆರ್.ಆರ್.ನಗರ  ಉಪಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರೆತೆಯಿಲ್ಲ. ಒಂದೊಂದು ಕ್ಷೇತ್ರದಲ್ಲಿ  ಎಂಟು ಮಂದಿ ಅಭ್ಯರ್ಥಿಗಳು ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.jk-logo-justkannada-logoಶಿರಾ ಮತ್ತು ಆರ್.ಆರ್.ನಗರ ಈ ಎರಡು ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ‌ ಘೋಷಣೆಯಾದ ಹಿನ್ನೆಲೆಯಲ್ಲಿ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಈ ಮೇಲಿನಂತೆ ಹೇಳಿದ್ದಾರೆ.shortage-candidates-Congress-party-Opposition- leader-Siddaramaiah

ಶಿರಾದಲ್ಲಿ ಸತ್ಯನಾರಾಯಣ್  ಗೆದ್ದಿದ್ದರು. ಅವರ ನಿಧನದಿಂದ ಅಲ್ಲಿ ಚುನಾವಣೆ ನಡೆಯಲಿದೆ, ಆರ್.ಆರ್.ನಗರದಿಂದ ಮುನಿರತ್ನ ರಾಜೀನಾಮೆ ಕೊಟ್ಟಿದ್ದರು, ಶಿರಾದಿಂದ ಜಯಚಂದ್ರ ಅಭ್ಯರ್ಥಿ ಮಾಡ್ತೇವೆ, ಆರ್.ಆರ್.ನಗರಕ್ಕೂ ಅಭ್ಯರ್ಥಿ ಹಾಕ್ತೇವೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆಯಿಲ್ಲ, ಒಂದೊಂದು ಕ್ಷೇತ್ರದಲ್ಲಿ ಎಂಟು ಮಂದಿ ಇದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಜೊತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರ ಬೀಳೋಕೆ ಕಾರಣವೇನು? ನಾವು ಯಾರ ಜೊತೆಯೂ ಅಲಯನ್ಸ್ ಮಾಡಿಕೊಳ್ಳಲ್ಲ. ನಾವು ಇಂಡಿಪೆಂಡೆಂಟ್ ಆಗಿ ನಿಲ್ತೇವೆ, ಆರ್.ಆರ್.ನಗರಕ್ಕೆ ಅಚ್ಚರಿ ಅಭ್ಯರ್ಥಿ ಅನ್ನೋದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಕುರುಬ ಸಮುದಾಯ ಎಸ್ಟಿ ಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮೊನ್ನೆ ಈಶ್ವರಪ್ಪ ಮನೆಯಲ್ಲಿ ಸಭೆ ಮಾಡಿದ್ರು. ನಾನು ಎಲ್ಲಿಗೂ ಹೋಗಿಲ್ಲ ನಾನು ಸಾಮಾಜಿಕ ನ್ಯಾಯಕ್ಕೆ‌ ಬದ್ಧ ನಾಗಿರುವವನು. ನನ್ನನ್ನ ಅವರು ಕರೆದೇ ಇಲ್ವಲ್ಲಪ್ಪಾ ಎಂದರು.

ಸಭೆಯಲ್ಲಿ ಸ್ವಾಮೀಜಿಗಳು ಭಾಗವಹಿಸಿರಬಹುದು. ಯಾದಗಿರಿ,ಬೀದರ್,ಕಲಬುರಗಿನಲ್ಲಿ ಗೊಂದಲ ಗೊಂಡ, ರಾಜಗೊಂಡ ಎಸ್ಟಿಗೆ ಸೇರಿಸುವ ಗೊಂದಲವಿದೆ. ಎಸ್ಟಿಗೆ ಸೇರಿಸುವಂತೆ ನಾವು ಕೇಳಿದ್ದೇವೆ. ಈಶ್ವರಪ್ಪ ಅದನ್ನ ಮೊದಲು ಮಾಡಿಸಲಿ. ಕೋಳಿ ಸಮಾಜಕ್ಕೂ ನಾವು ಶಿಫಾರಸು ಮಾಡಿದ್ದೆವು. ಈಶ್ವರಪ್ಪ ಅದನ್ನೂ ಮೊದಲು ಮಾಡಿಸಲಿ ಎಂದು ಸಿದ್ಧರಾಮಯ್ಯ ಸಲಹೆ ನೀಡಿದರು.

ಈಶ್ವರಪ್ಪ ನಾನು ವೈಯುಕ್ತಿಕ ಉತ್ತಮ ಸ್ನೇಹಿತರು. ಆದರೆ ರಾಜಕೀಯ ಸಿದ್ಧಾಂತ ಬೇರೆಬೇರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪಗೆ  ಸಿದ್ದರಾಮಯ್ಯ ಟಾಂಗ್ ನೀಡಿದರು.

key words : shortage-candidates-Congress-party-Opposition- leader-Siddaramaiah