ಚಾಲೆಂಜಿಂಗ್ ಸ್ಟಾರ್ ದರ್ಶನ್’ರ ‘ಕ್ರಾಂತಿ’ಗೆ ಚಿಕ್ಕ ಬ್ರೇಕ್ !

ಬೆಂಗಳೂರು, 18, 01, 2021 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಶೂಟಿಂಗ್ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್ ಮಾತನಾಡಿದ್ದಾರೆ.

ನಿರ್ದೇಶಕ ವಿ.ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರ. ಸಾಕಷ್ಟು ಕುತೂಹಲ ಮೂಡಿಸಿದೆ. ಕೊರೊನಾ ಆತಂಕದಲ್ಲಿ ಶೂಟಿಂಗ್ ನಿಂತು ಹೋದರೆ ಮತ್ತೆ ಬಿಡುಗಡೆ ತಡವಾಗುತ್ತೆ ಎನ್ನಲಾಗಿತ್ತು.

ಆದರೆ ಈಗ ಚಿತ್ರದ ಕುರಿತು ಶೈಲಜಾ ನಾಗ್ ಮಾತನಾಡಿದ್ದಾರೆ. ಸಿನಿಮಾ ಚಿತ್ರೀಕರಣ ಕೊರೊನಾದಿಂದ ನಿಂತಿಲ್ಲ. ಚಿಕ್ಕದೊಂದು ಬ್ರೇಕ್ ತೆಗೆದುಕೊಳ್ಳಲಾಗಿದೆ ಅಷ್ಟೇ ಎಂದಿದ್ದಾರೆ.

ಕ್ರಾಂತಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿಕ್ಕದೊಂದು ಬ್ರೇಕ್ ಪಡೆದಿದ್ದೇವೆ ಅಷ್ಟೇ. ಇನ್ನು ಮೂರು ನಾಲ್ಕು ದಿನಗಳಲ್ಲಿ ಮತ್ತೆ ಕ್ರಾಂತಿ ಚಿತ್ರದ ಶೂಟಿಂಗ್ ಅನ್ನು ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.