ಗಾಳಿಯಲ್ಲಿ ಗುಂಡುಹಾರಿಸಿ ಹೊಸ ವರ್ಷ ಸಂಭ್ರಮಿಸಿರುವ ಪುಂಡರ…!

ಹಾಸನ,ಜನವರಿ,03,2021(www.justkannada.in) : ಹೊಸ ವರ್ಷಾಚರಣೆ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿಯಲ್ಲಿ ನಡೆದಿದೆ.jk-logo-justkannada-mysoreಹೊಸ ವರ್ಷಾಚರಣೆ ನೆಪದಲ್ಲಿ ಪುಂಡರ ಗುಂಪೊಂದು ದುಂಡಾವರ್ತನೆ ತೋರಿದೆ. ಸದ್ಯ ಈಗ ಪುಂಡರು ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ.

Shoot,air,celebrate,New Year,Scoundrels

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ತಡರಾತ್ರಿ ಪುಮಡರ ಗುಂಪೊಂದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ನಾವು ಪಟಾಕಿ ಹೊಡೆಯುವವರಲ್ಲ, ಗುಂಡು ಹೊಡೆಯುವವರು ಎಂದು ಕುಡಿದು ಕುಪ್ಪಳಿಸಿರುವುದನ್ನು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪುಂಡರು ಹರಿಬಿಟ್ಟಿದ್ದಾರೆ.

key words : Shoot-air-celebrate-New Year-Scoundrels