‘ಬಡ್ಡೀಸ್’ ಚಿತ್ರ ತಂಡದ ಪ್ರಚಾರಕ್ಕೆ ಅಪಘಾತದ ಶಾಕ್ !

ಬೆಂಗಳೂರು, ಜೂನ್ 18, 2022 (www.justkannada.in): ‘ಬಡ್ಡೀಸ್’ ಚಿತ್ರ ಪ್ರಚಾರ ಕಾರ್ಯದಲ್ಲಿ ಬಳಕೆ ಆಗುತ್ತಿದ್ದ ಟ್ರಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಹೀಗಾಗಿ, ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿರುವ ಕಿರಣ್ ರಾಜ್ ಸಿನಿಮಾ ‘ಬಡ್ಡೀಸ್​’ ಜೂನ್ 24ರಂದು ತೆರೆಗೆ ಬರುತ್ತಿದೆ.

ಸಿನಿಮಾದ ಪ್ರಮೋಷನಲ್​ ಕಾರ್ಯದಲ್ಲಿ ಕಿರಣ್ ರಾಜ್ ಬ್ಯುಸಿ ಆಗಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಈ ನಡುವೆ ಈ ಅವಘಡ ಸಂಭವಿಸಿದೆ.

ಬೆಳಗಾವಿ ಸಮೀಪದ ಕೆಲ ಕಾಲೇಜುಗಳಿಗೆ ‘ಬಡ್ಡೀಸ್’ ತಂಡ ತೆರಳಬೇಕಿತ್ತು. ಆದರೆ, ಪ್ರಚಾರ ಕಾರ್ಯದಲ್ಲಿ ಬಳಕೆ ಆಗುತ್ತಿದ್ದ ಟ್ರಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಹೀಗಾಗಿ, ಇಂದಿನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.