ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರಕ್ಕೆ ತೆರಳಿದ್ದ ಸಿ.ಪಿ ಯೋಗೇಶ್ವರ್ ಗೆ ಶಾಕ್…

ಹುಣಸೂರು,ನ,29,2019(www.justkannada.in):  ಡಿಸೆಂಬರ್ 5 ರಂದು ಹುಣಸೂರು ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಮತಯಾಚನೆಗೆ ತೆರಳಿದ್ದ ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಹುಣಸೂರು ತಾಲ್ಲೂಕಿನ ಹನಗೋಡಿನ ಹೆಗ್ಗಂದೂರಿನಲ್ಲಿ  ಹೆಚ್.ವಿಶ್ವನಾಥ್ ಪರ  ಮತಯಾಚನಗೆ  ತೆರಳಿದ್ದ  ಬಿಜೆಪಿ ಸಿ.ಪಿ ಯೋಗೇಶ್ವರ್ ಗೆ ಗ್ರಾಮದೊಳಕ್ಕೆ ಬರಬೇಡಿ.  ವಿಶ್ವನಾಥ್ ಅವರ ಜತೆ ಬನ್ನಿ. ವಿಶ್ವನಾಥ್ ಅವರನ್ನ ಪ್ರಶ್ನಿಸಬೇಕು. ಹೀಗಾಗಿ ಅವರನ್ನ ಕರೆದುಕೊಂಡು ಬನ್ನಿ ಎಂದು ಗ್ರಾಮಸ್ಥರು ಘೆರಾವ್ ಹಾಕಿದ ಘಟನೆ ನಡೆಯಿತು.

ಇಂದು ಬೆಳಿಗ್ಗೆಯಷ್ಟೆ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮುಟಳ್ಳಿಯ ಸ್ವಗ್ರಾಮದಲ್ಲೇ, ಬ್ಯಾನರ್ ಹಾಕಿ ಹಣಕ್ಕೆ ಮಾರಿಕೊಂಡ ಅನರ್ಹ ಶಾಸಕರಿಗೆ ಪ್ರವೇಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Key words: Shock- CP Yogeshwar – campaigning -BJP candidate- H Vishwanath-hunsur