‘ಬಿಲ್’ಗೆಟ್ಸ್’ ಟ್ರೈಲರ್’ನಲ್ಲಿ ಚಿಕ್ಕಣ್ಣ-ಶಿಶಿರ್ ಶಾಸ್ತ್ರಿ ಕಾಮಿಡಿ ಝಲಕ್ !

ಬೆಂಗಳೂರು, ಜನವರಿ 17, 2019 (www.justkannada.in): ಬಿಲ್ ಗೆಟ್ಸ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ನಲ್ಲಿ ಚಿಕ್ಕಣ್ಣನ ಯಮನ ಅವತಾರಕಂಡು ನಗೆ ಬೀರಿದ್ದ ಸಿನಿ ಪ್ರೇಕ್ಷಕರು ಟ್ರೈಲರ್ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದಾರೆ.

ಇದೀಗ ಕಾಮಿಡಿ ಎಂಟಟೈನ್ಮೆಂಟ್ ಚಿತ್ರಕ್ಕೆ ಹಾರಾರ್ ಟಚ್ ಕೂಡ ನೀಡಲಾಗಿದ್ದು ಕುತೂಹಲ ಉಂಟು ಮಾಡಿದೆ. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗಿದ್ದು ಶ್ರೀನಿವಾಸ.ಸಿ ನಿರ್ದೇಶನ ಮಾಡಿದ್ದಾರೆ.