Thursday, August 13, 2026

BDA Apartments

Home Cinema ಅನುಷ್ಕಾ ಕನ್ನಡ ಪ್ರೇಮಕ್ಕೆ ಅಭಿಮಾನಿಗಳು ಫಿದಾ !

ಅನುಷ್ಕಾ ಕನ್ನಡ ಪ್ರೇಮಕ್ಕೆ ಅಭಿಮಾನಿಗಳು ಫಿದಾ !

ಬೆಂಗಳೂರು, ಜನವರಿ 17, 2019 (www.justkannada.in): ನಟಿ ಅನುಷ್ಕಾ ಶೆಟ್ಟಿ ಕನ್ನಡ ಅಭಿಮಾನ ಎಲ್ಲರಿಗೂ ಗೊತ್ತಿರುವುದೇ…

ಇದೀಗ ಮತ್ತೊಮ್ಮೆ ಅದು ಸಾಬೀತಾಗಿದೆ. ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕನ್ನಡದಲ್ಲಿ ಸಂಕ್ರಾಂತಿ ಶುಭಾಶಯ ತಿಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳೂರು ಮೂಲದವರಾದ ನಟಿ ಅನುಷ್ಕಾ ಶೆಟ್ಟಿ ಅವರು ಹೆಚ್ಚು ನಟಿಸಿದ್ದು ಮಾತ್ರ ತೆಲುಗು, ತಮಿಳು ಸಿನಿಮಾದಲ್ಲಿ. ಆದರೆ ಕನ್ನಡ ಪ್ರೇಮ, ತಾಯ್ನಾಡಿಗೆ ಮಿಡಿಯುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ.

ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅನುಷ್ಕಾ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಕೋರಿದ್ದರು. ಇದಕ್ಕೆ ಕನ್ನಡದ ಅನುಷ್ಕಾ ಅಭಿಮಾನಿಗಳು ಫಿದಾ ಆಗಿದ್ದಾರೆ.