ಶಿವಮೊಗ್ಗ ಗಲಭೆ ವಿಚಾರ: ಕಾಂಗ್ರೆಸ್ ಆರೋಪಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು.

ಶಿವಮೊಗ್ಗ,ಆಗಸ್ಟ್,19,2022(www.justkannada.in):  ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನದಂದು ಶಿವಮೊಗ್ಗದಲ್ಲಿ ನಡೆದ ಗಲಭೆಗೆ  ಕೆ.ಎಸ್ ಈಶ್ವರಪ್ಪ ಕಾರಣ ಎಂದು ಆರೋಪಿಸಿದ ಕಾಂಗ್ರೆಸ್ ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ,  ಶಿವಮೊಗ್ಗದಲ್ಲಿ ಗಲಾಟೆ ಮಾಡಿದ್ದು ನಾನು. ಸಾವರ್ಕರ್ ಭಾವಚಿತ್ರ ಹರಿದಿದ್ದು  ಪ್ರೇಮ್ ಸಿಂಗ್ ಗೆ ಚಾಕು ಹಾಕಿದ್ದು ನಾನು ಅಲ್ವಾ..? ಭಂಡರಿಗೆ ಭಂಡತನದ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಸಿದ್ಧರಾಮಯ್ಯಗೆ ಮೊಟ್ಟ  ಎಸೆತ ಘಟನೆ ಸಿಎಂ ಬೊಮ್ಮಾಯಿ,  ಬಿಎಸ್ ವೈ ಖಂಡಿಸಿದ್ದಾರೆ. ನಾಯಕರ ಹೇಳಿಕೆಗೆ ಬದ್ಧ. ಹೊಸದೇನು ಹೇಳಲ್ಲ ಎಂದರು. ಇನ್ನು  ಸಿದ್ಧರಾಮಯ್ಯ ಮತ್ತು ತಮ್ಮ ನಡುವಿನ ಟ್ವೀಟ್ ವಾರ್ ಕುರಿತು ಪ್ರತಿಕ್ರಿಯಿಸಿದ  ಕೆ.ಎಸ್ ಈಶ್ವರಪ್ಪ, ಟ್ವಿಟ್ ವಾರ ನಡೆಯುವುದು ಸಹಜ .  ನಾವು ಮಾಡುವುದನ್ನ ಅವರು ಹೊಗಳಲ್ಲ. ಅವರು ಮಾಡಿದ್ದನ್ನ ನಾನು ಹೊಗಳುವುದಿಲ್ಲ ಎಂದರು.

Key words: Shimoga -riot –issue-Former minister -KS Eshwarappa