ಆರ್ ಎಸ್ ಎಸ್ ಮೊದಲ ಭಯೋತ್ಪಾದಕ ಸಾವರ್ಕರ್:  ಮೊಟ್ಟೆ ಎಸೆತ ಘಟನೆ ಖಂಡಿಸಿ ಬಿ.ಕೆ ಹರಿಪ್ರಸಾದ್ ಆಕ್ರೋಶ.

ಬೆಂಗಳೂರು,ಆಗಸ್ಟ್,19,2022(www.justkannada.in): ನಿನ್ನೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆಯನ್ನ ಖಂಡಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್  ಆರ್.ಎಸ್.ಎಸ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್, ಸಿದ‍್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಖಂಡನೀಯ.  ಜ್ಞಾನವಿಲ್ಲದ ಗೃಹಮಂತ್ರಿ ಅರಗ ಜ್ಞಾನೇಂದ್ರ.  ಆರ್ ಎಸ್ ಎಸ್ ಮತ್ತು ಬಿಜೆಪಿಯವರು ಕದ್ದು ಮೊಟ್ಟೆ ತಿಂತಾರೆ.  ಸಂಘಪರಿವಾರದವರು ಕದ್ದು ಮಾಂಸ ತಿಂತಾರೆ . ಕೊಡಗಿನ ಜನರು ಏನೇ ಇದ್ದರೂ  ನೇರವಾಗೆ ಮಾಡುತ್ತಾರೆ. . ಈ ರೀತಿ ಮೊಟ್ಟೆ ಎಸೆದು ಓಡಿಹೋಲ್ಲ ಎಂದರು.

ಜಗತ್ತಿನ ಮೊದಲ ಭಯೋತ್ಪಾದಕ ನಾಥೂರಾಮ್ ಗೂಡ್ಸೆ. ಆರ್ ಎಸ್ ಎಸ್  ಮೊದಲ ಭಯೋತ್ಪಾದಕ ಸಾವರ್ಕರ್.   ಸಿಎಂ ಬೊಮ್ಮಾಯಿ ಆರ್ ಎಸ್ಎಸ್ ನ ಕೈಗೊಂಬೆಯಾಗಿದ್ದಾರೆ.  ಸಾವರ್ಕರ್  ಬಗ್ಗೆ ಸಿದ‍್ಧರಾಮಯ್ಯ ಹೇಳಿದ್ದು ತಪ್ಪಲ್ಲ.. ಸಾವರ್ಕರ್ ನಾಥೂರಾಮ್ ಗೂಡ್ಸೆ ಫೋಟೊಗೆ ಕಿಮ್ಮತ್ತಿಲ್ಲ ಕಸದ ತೊಟ್ಟಿ ಮೇಲೆ ಫೋಟೊ ಹಾಕಲು ಯೋಗ್ಯರಲ್ಲ ಎಂದು ಬಿ.ಕೆ ಹರಿಪ್ರಸಾದ್ ಟೀಕಿಸಿದರು.

Key words: Savarkar – first -terrorist –RSS-BK Hariprasad-outrage