ಪುತ್ರನಿಗೆ ಕೈತಪ್ಪಿದ ಶಿವಮೊಗ್ಗ ಬಿಜೆಪಿ ಟಿಕೆಟ್​: ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ಏನು..?

ಶಿವಮೊಗ್ಗ,ಏ,20,2023(www.justkannada.in): ತೀವ್ರ ಕುತೂಹಲ ಹುಟ್ಟುಹಾಕಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಚನ್ನಬಸಪ್ಪ ಎನ್ನುವರಿಗೆ  ಟಿಕೆಟ್ ನೀಡಲಾಗಿದೆ. ಈ ಮೂಲಕ  ಟಿಕೆಟ್​ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆಎಸ್ ಈಶರಪ್ಪ ಪುತ್ರ  ಕಾಂತೇಶ್ ಗೆ ನಿರಾಸೆಯಾಗಿದೆ.

ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ  ಎಂದು  ಘೋಷಿಸಿ ಚುನಾವಣಾ ರಾಜಕಾರಣದಿಂದ ನಿವೃತ್ತರಾದ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಪುತ್ರ  ಕಾಂತೇಶ್ ಟಿಕೆಟ್​ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೂ ಬಿಜೆಪಿ ಹೈಕಮಾಂಡ್​ ಈಶ್ವರಪ್ಪ ಅವರಿಗೆ ಶಾಕ್ ಕೊಟ್ಟಿದೆ.

 ಈ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ , ಚನ್ನಬಸಪ್ಪಗೆ ಶಿವಮೊಗ್ಗ ಟಿಕೆಟ್​​ ನೀಡಿದ್ದಕ್ಕೆ ಸಂತಸ ಆಗಿದೆ. ಚನ್ನಬಸಪ್ಪ ಬಿಜೆಪಿಯ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತ. ಬಿಜೆಪಿ ಸಂಘಟನೆಯಲ್ಲಿ ಚನ್ನಬಸಪ್ಪ ಪ್ರಮುಖ ಪಾತ್ರವಹಿಸಿದ್ದಾರೆ. ಆಡಳಿತದಲ್ಲಿ ಅನುಭವ ಇರುವ ವ್ಯಕ್ತಿಗೆ ಬಿಜೆಪಿ ಮಣೆ ಹಾಕಿದೆ. ಕಾಂತೇಶ್​​ಗೆ ಟಿಕೆಟ್​​ ನೀಡಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಯಾವುದೇ ಪ್ರಶ್ನೆ ಮಾಡದಂತೆ ಚನ್ನಬಸಪ್ಪ ಗೆಲ್ಲಿಸಲು ಶ್ರಮಿಸಬೇಕು ಎಂದು  ಹೇಳಿದ್ದಾರೆ.

Key words: Shimoga- BJP -ticket – former DCM -KS Eshwarappa- son