ಕಾಂಗ್ರೆಸ್ ನವರದ್ದು ಲಿಂಗಾಯತ ವಿರೋಧಿ ನಡೆ: ಸಿಎಂ ಬೊಮ್ಮಾಯಿ ತಿರುಗೇಟು.

ಬೆಂಗಳೂರು,ಏಪ್ರಿಲ್,20,2023(www.justkannada.in): ಬಿಜೆಪಿ ಲಿಂಗಾಯತರನ್ನ ಕಡೆಗಣಿಸಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಒಬ್ಬ ಲಿಂಗಾಯತರನ್ನ ಸಿಎಂ ಮಾಡಿಲ್.  ವೀರೇಂದ್ರ ಪಾಟೀಲ್ ರನ್ನ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ ಕಾಂಗ್ರೆಸ್ ನದ್ದು ಲಿಂಗಾಯಿತ ವಿರೋಧಿ ನಡೆ ಕಾಂಗ್ರೆಸ್ ಲಿಂಗಾಯತ ಧರ್ಮವನ್ನೇ ಒಡೆಯಲು ಮುಂದಾಗಿತ್ತು. ಮತಬ್ಯಾಂಕ್ ಗಾಗಿ ಧರ್ಮ ಒಡೆಯಲು ಮುಂದಾಗಿದ್ರು. ಇದನ್ನ ಜನರು ಮರೆಯುತ್ತಾರಾ.. ದಲಿತರು ಹಿಂದುಳಿದವರು ಲಿಂಗಾಯತರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಕಿಡಿಕಾರಿದರು.

ವರಣಾದಲ್ಲಿ ಬಿಜೆಪಿ- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಸಿದ್ಧರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ವರುಣಾದಲ್ಲಿ  ಸಿದ್ಧರಾಮಯ್ಯಗೆ ಭಯ ಅನಿಶ್ಚಿತತೆ ಕಾಡ್ತಿದೆ. ಸಿದ್ಧರಾಮಯ್ಯ ಹಲವು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಸ್ವಂತ ಬಲದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಬೇಕೆ ವಿನಃ ಬಿಜೆಪಿ- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಅನ್ನೋದು ಸರಿಯಲ್ಲ. ಶಿಗ್ಗಾಂವಿಯಲ್ಲೂ ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಆದರೆ ಇವರ ತಂತ್ರಗಾರಿಕೆಯಿಂದ ನಮಗೆ ವ್ಯತ್ಯಾಸವೇನೂ ಆಗಲ್ಲ ಎಂದು ನುಡಿದರು.

Key words: Congress- move – anti Lingayat- CM Bommai