ಬರುತ್ತಿದೆ ಶಶಾಂಕ್ -ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ಚಿತ್ರ !

ಬೆಂಗಳೂರು, ಅಕ್ಟೋಬರ್ 07, 2022 (www.justkannada.in): ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ ನೂತನ ಚಿತ್ರದ ನಾಯಕನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಲಿದ್ದಾರೆ.

ಅಂದಹಾಗೆ  ಚಿತ್ರದ ಮುಹೂರ್ತ ಸಮಾರಂಭ ವಿಜಯ ದಶಮಿ ಶುಭದಿನದಂದು ನೆರವೇರಿದೆ.

ಶಶಾಂಕ್ ಸಿನಿಮಾಸ್ ಹಾಗೂ ಕೌರವ ಪ್ರೊಡಕ್ಷನ್ಸ್ ಹೌಸ್ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ.

ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಅನಾವರಣವಾಗಲಿದೆ. ಈ ಮೂಲಕ ಶಶಾಂಕ್ -ಡಾರ್ಲಿಂಗ್ ಕೃಷ್ಣಕಾಂಬಿನೇಷನ್ ಚಿತ್ರ ಹೇಗಿರಲಿದೆ ಎಂಬ ಕುತೂಗಲ ಮೂಡಿದೆ.