ಮೆಗಾಸ್ಟಾರ್ ಚಿರಂಜೀವಿ-ಸಲ್ಮಾನ್ ಖಾನ್ ‘ಗಾಡ್’ಫಾದರ್’ ಗಳಿಕೆಯಲ್ಲಿ ಮುಂದು !

ಬೆಂಗಳೂರು, ಅಕ್ಟೋಬರ್ 07, 2022 (www.justkannada.in): ಮೆಗಾಸ್ಟಾರ್‌ ಚಿರಂಜೀವಿ, ಸಲ್ಮಾನ್‌ ಖಾನ್‌ ಅಭಿನಯದ ‘ಗಾಡ್‌ಫಾದರ್‌’ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಆರಂಭ ಮಾಡಿದೆ.

ಬಿಡುಗಡೆಗೊಂಡ ಚಿತ್ರ ಮೊದಲ ದಿನವೇ ₹38 ಕೋಟಿ ಗಳಿಸಿದೆ. ಆಂಧ್ರ, ತೆಲಂಗಾಣದ ಬಹುತೇಕ ಚಿತ್ರಮಂದಿರಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎನ್ನಲಾಗುತ್ತಿದೆ.

ಗಾಡ್‌ಫಾದರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೋಹನ್‌ಲಾಲ್‌ ನಟಿಸಿ, ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಿಸಿದ್ದ ಮಲಯಾಳ ಚಿತ್ರ ‘ಲೂಸಿಫರ್‌’ ರಿಮೇಕ್‌ ಇದಾಗಿದೆ.

ಅಂದಹಾಗೆ ನಯನತಾರ ಮತ್ತು ಸತ್ಯದೇವ್‌ ಚಿತ್ರದಲ್ಲಿದ್ದಾರೆ. ಮೋಹನ್‌ ರಾಜ್‌ ‘ಗಾಡ್‌ಫಾದರ್‌’ ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳಿದ್ದಾರೆ.