7.16 ಕೋಟಿ ರೂ.ಗೆ ಶೇನ್ ವಾರ್ನ್ ಗ್ರೀನ್ ಕ್ಯಾಪ್ ಹರಾಜು !

ಮೆಲ್ಬೋರ್ನ್, ಜನವರಿ 10, 2019 (www.justkannada.in): ಆಸ್ಟ್ರೇಲಿಯಾ ತಂಡದ ಮಾಜಿ ಲೆಗ್​ಸ್ಪಿನ್ ದಿಗ್ಗಜ ಶೇನ್ ವಾರ್ನ್​ ನಿವೃತ್ತಿಯ ನಂತರವೂ ದಾಖಲೆ ನಿರ್ಮಿಸಿದ್ದಾರೆ.

ಇತ್ತೀಚಿಗಷ್ಟೆ ವಾರ್ನ್​ ತಮ್ಮ ಬ್ಯಾಗಿ ಗ್ರೀನ್ ಕ್ಯಾಪ್​ ಅನ್ನ, ಬುಶ್​ಫೈರ್​ ಸಂತ್ರಸ್ತರಿಗೆ ನೆರವು ನೀಡಲು ಹರಾಜಿಗೆ ಇಟ್ಟಿದ್ದರು. ವಾರ್ನ್ ಬ್ಯಾಗಿ ಗ್ರೀನ್ ಕ್ಯಾಪ್, ಒಂದು ಲಕ್ಷಕ್ಕೂ ಅಧಿಕ ಯು.ಎಸ್ ಡಾಲರ್ ಮೊತ್ತಕ್ಕೆ ಮಾರಾಟವಾಗಿ, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಹರಾಜಿನಲ್ಲಿ ಸುಮಾರು 7.16 ಕೋಟಿ ರೂಪಾಯಿ ಅಧಿಕ ಮೊತ್ತಕ್ಕೂ ಮಾರಾಟವಾದ ಬ್ಯಾಗಿ ಗ್ರೀನ್ ಕ್ಯಾಪ್​ ಕುರಿತು, ವಾರ್ನ್ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹರಾಜಿನಲ್ಲಿ ಬಂದ ಹಣ ನೇರವಾಗಿ ಸಂತ್ರಸ್ತರಿಗೆ ತಲುಪಲಿದೆ ಅಂತ ಶೇನ್ ವಾರ್ನ್ ಭರವಸೆ ವ್ಯಕ್ತಪಡಿಸಿದ್ದಾರೆ.