ಶೀಘ್ರ ಏಕದಿನ ಕ್ರಿಕೆಟ್’ಗೆ ಧೋನಿ ವಿದಾಯ

ಮುಂಬೈ, ಜನವರಿ 10, 2019 (www.justkannada.in): ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರವೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ.

ಈ ವಿಷಯವನ್ನು ಮುಖ್ಯ ಕೋಚ್ ರವಿಶಾಸ್ತಿ ಬಹಿರಂಗಪಡಿಸಿದ್ದಾರೆ. ಎಂಎಸ್‌ ಅವರೊಂದಿಗೆ ನಾನು ಮಾತನಾಡಿದ್ದೇನೆ. ಇದು ನಮ್ಮ ಇಬ್ಬರ ನಡುವೆ ನಡೆದ ಮಾತುಕತೆ ಎಂದು ತಿಳಿಸಿದ್ದಾರೆ.

ಧೋನಿ ಟೆಸ್ಟ್ ಕ್ರಿಕೆಟನ್ನು ಪೂರ್ಣಗೊಳಿಸಿದ್ದಾರೆ. ಶೀಘ್ರವೇ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಶಾಸ್ತ್ರಿ ಖಾಸಗಿ ವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.