Sunday, August 23, 2026

BDA Apartments

Home Front Page ಮುನಿರತ್ನ ಸಮರ್ಥಿಸಿಕೊಳ್ಳುವ ಬಿಜೆಪಿಗೆ ನಾಚಿಕೆ ಆಗಲ್ವಾ?  ಡಿ.ಕೆ ಸುರೇಶ್ ವಾಗ್ದಾಳಿ

ಮುನಿರತ್ನ ಸಮರ್ಥಿಸಿಕೊಳ್ಳುವ ಬಿಜೆಪಿಗೆ ನಾಚಿಕೆ ಆಗಲ್ವಾ?  ಡಿ.ಕೆ ಸುರೇಶ್ ವಾಗ್ದಾಳಿ

ಬೆಂಗಳೂರು,ಸೆಪ್ಟಂಬರ್,19,2024 (www.justkannada.in):  ಗುತ್ತಿಗೆದಾರನಿಗೆ ಜಾತಿ ನಿಂದನೆ , ಜೀವ ಬೆದರಿಕೆ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಸಮರ್ಥಿಸಿಕೊಳ್ಳುವ ಬಿಜೆಪಿಗೆ ನಾಚಿಕೆ ಆಗಲ್ವಾ? ಎಂದು ಮಾಜಿ ಸಂಸದ  ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಒಕ್ಕಲಿಗರಿಗೆ ಅವಮಾನ ಮಾಡಿದ್ದಾರೆ ಆದರೆ ಇದರ ಬಗ್ಗೆ ಧ್ವನಿ ಎತ್ತಲಿಲ್ಲ.  ಬಿಜೆಪಿಯರವರೆಲ್ಲರೂ ಒಂದೇ ಬ್ಲೂ ಬಾಯ್ಸ್ ಗ್ಯಾಂಗ್ . ಬಿಜೆಪಿಯವರು ಮಾಡೋದೆಲ್ಲಾ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ  ಎಂದು ಕಿಡಿಕಾರಿದರು.

ಡಿಸಿಎಂ ಡಿಕೆ ಶಿವಕುಮಾರ್ ಗೆ ಸುಪ್ರೀಂಕೋರ್ಟ್ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನಮಗೆ ಒಂದು ತಿಂಗಳು ಕಾಲಾವಕಾಶ ಕೊಟ್ಟಿದೆ. ಇಲ್ಲಿ  ಯತ್ನಾಳ್ ಪಾತ್ರ ಏನಿಲ್ಲ ಯತ್ನಾಳ್ ಹಿಂದೆ ಕಾಣದ ಕೈಗಳು ಬಹಳಷ್ಟಿವೆ. ನಮ್ಮ ಪಕ್ಷದವರು ಇದರ ಹಿಂದೆ ಯಾರೂ ಇಲ್ಲ ಎಂದರು.

ಬಿಜೆಪಿಯಲ್ಲಿ 2 ಬಣ ಇದೆ.  ಯತ್ನಾಳ್ ಮೇಲೆ ಕ್ರಮ ಜರುಗಿಸಲಿಲ್ಲ  5 ವರ್ಷ ಆಯ್ತು ಬಿಜೆಪಿ ಹೈಕಮಾಂಡ್ ನವರು ಏನು ಮಾಡಿದ್ರು ಎಂದು ಲೇವಡಿ ಮಾಡಿದರು.

Key words: Shame, BJP, defending, Muniratna, D.K Suresh