Thursday, July 30, 2026

BDA Apartments

Home Front Page ನಮಗೆಲ್ಲರಿಗೂ ಹೆಚ್.ಡಿ ದೇವೇಗೌಡರೇ ಆದರ್ಶ: ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ನಮಗೆಲ್ಲರಿಗೂ ಹೆಚ್.ಡಿ ದೇವೇಗೌಡರೇ ಆದರ್ಶ: ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು,ಫೆಬ್ರವರಿ,24,2023(www.justkannada.in):  ಇದು ನನ್ನ ಕೊನೆಯ ಅಧಿವೇಶನ. ನಾನು ಈ ಮಟ್ಟಕ್ಕೆ ಬೆಳೆಯಲು ಆರ್ ಎಸ್ ಎಸ್ ಕಾರಣ. ನಮಗೆಲ್ಲರಿಗೂ ಹೆಚ್.ಡಿ ದೇವೇಗೌಡರೇ ಆದರ್ಶ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಸದನದಲ್ಲಿ ಇಂದು ಭಾಷಣ ಮಾಡಿದ ಬಿಎಸ್ ಯಡಿಯೂರಪ್ಪ, ಶಿಕಾರಿಪುರ  ಕ್ಷೇಥ್ರದ ಜನರಿಗೆ ನಾನು ಚಿರಋಣಿ . ನಾನು ಈ ಮಟ್ಟಕ್ಕೆ ಬೆಳೆಯಲು ಆರ್ ಎಸ್ಎಸ್ ಕಾರಣ. ನಮಗೆ ದೇವೇಗೌಡರೇ ಆದರ್ಶ. ಇದು ನನ್ನ ಕೊನೆಯ ಅಧಿವೇಶನ ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಡಿ ಹೊಗಳಿದ ಬಿಎಸ್ ವೈ,  ಸಭಾಧ್ಯಕ್ಷರಾಗಿ ಸದನದ ನಡೆಸಿದ ರೀತಿ ಎಲ್ಲರೂ ಮೆಚ್ಚುವಂತಹದ್ದು ಮುಂದಿನ ಅಧೀವೇಶನದಲ್ಲಿ ಸ್ಪೀಕರ್ ಪೀಠದಲ್ಲಿ ಕೂರದೇ ಸಚಿವರಾಗಿ. ಇದನ್ನು ನಾನು ಸಿಎಂಗೆ ಮನವಿ ಮಾಡುತ್ತೇನೆ ಎಂದರು.

Key words: session- former CM- BS yeddyurappa- speech