Friday, September 18, 2026

BDA Apartments

ವಿಧಾನ ಮಂಡಲ ಅಧಿವೇಶನ: ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ BDA JK_Adv BDA Adv
Home Front Page ವಿಧಾನ ಮಂಡಲ ಅಧಿವೇಶನ: ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ.

ವಿಧಾನ ಮಂಡಲ ಅಧಿವೇಶನ: ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ.

ಬೆಂಗಳೂರು, ಫೆಬ್ರವರಿ,28,2024(www.justkannada.in): ಪಾಕ್ ಪರ ಘೋಷಣೆ ಆರೋಪ ವಿಚಾರ ಇಂದು ಸದನದಲ್ಲಿ ಪ್ರಸ್ತಾವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಟಾಪಟಿ ನಡೆಯಿತು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ  ಮಾಡಲಾಗಿದೆ.

ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನ ನಾಸಿರ್‌ ಹುಸೇನ್‌ ಗೆಲುವು ಸಾಧಿಸಿದ ಮೇಲೆ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಇದನ್ನು ಖಂಡಿಸಿ ಇಂದು ವಿಧಾನಸಭೆ ಕಲಾಪದಲ್ಲಿ ಸದನದ ಬಾವಿಯಲ್ಲಿ ವಿಪಕ್ಷ ಬಿಜೆಪಿ ಧರಣಿ ನಡೆಸಿತ್ತು. ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಮಂಡಲ ಅಧಿವೇಶನ session session 1

ಈ ಹಿನ್ನಲೆಯಲ್ಲಿ  ಕಲಾಪವನ್ನು ನಾಳೆ ಬೆಳಗ್ಗೆ 9 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ. ವಿಧಾನ ಮಂಡಲ ಅಧಿವೇಶನ ಇಂದಿಗೆ ಮುಕ್ತಾಯವಾಗಬೇಕಿತ್ತು.

Key words:  session- Assembly -session -extended