ಶಾಲಾ ಕಾಲೇಜುಗಳಲ್ಲಿ ಯೋಗ ಕಡ್ಡಾಯಕ್ಕೆ ಗಂಭೀರ ಚಿಂತನೆ –ಸಚಿವ ಜಿ.ಟಿ ದೇವೇಗೌಡ…

ಮೈಸೂರು,ಜೂ,21,2019(www.justkakannada.in): ಶಾಲಾ ಕಾಲೇಜುಗಳಲ್ಲಿ ಯೋಗ ಕಡ್ಡಾಯವಾಗಿ ಕಲಿಸಲು ಗಂಭೀರ ಚಿಂತನೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ತಿಳಿಸಿದರು.

ಇಂದು ವಿಶ್ವಯೋಗ ದಿನ ಹಿನ್ನೆಲೆ ನಗರದ ರೇಸ್ ಕೋರ್ಸ್ ನಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು, ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಯೋಗ ಕಡ್ಡಾಯವಾಗಿ ಕಲಿಸಲು ಗಂಭೀರ ಚಿಂತನೆ ಮಾಡಲಾಗಿದೆ. ಈಗಾಗಲೇ ಕುಲಪತಿಗಳ ಜೊತೆ ಚರ್ಚೆ ಮಾಡಿದ್ದೇನೆ. ಕೆಲವು ಕಡೆ ಯೋಗ ಶಿಕ್ಷಣ ಆರಂಭವಾಗಿದೆ. ಎಲ್ಲ ಕಡೆ ಆರಂಭಿಸಲು ಕಡ್ಡಾಯ ಮಾಡುವ ಬಗ್ಗೆ ಚಿಂತನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಕ್ರಮಕ್ಕೆ ಮುಂದಾಗುತ್ತೇವೆ. ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಕಡ್ಡಾಯಗೊಳಿಸುತ್ತೇವೆ ಎಂದರು.

ಮೋದಿ ಸದಾಯಶದಂತೆ ಕಳೆದ 5 ವರ್ಷ ಯಶಸ್ವಿಯಾಗಿ ಯೋಗ ನಡೆದಿದೆ. ಈ ಬಾರಿಯೂ ಯಶಸ್ವಿಯಾಗಿ ಯೋಗದಿನ ನಡೆದಿದೆ. ಮುಂದಿನ ಬಾರಿ ಗಿನ್ನಿಸ್ ರೆಕಾರ್ಡ್‌ಗೆ ಪ್ರಯತ್ನ ಮಾಡುತ್ತೇವೆ. ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವ ಮೂಲಕ ಅರೋಗ್ಯ ಕಾಪಾಡಿಕೊಳ್ಳಿ ಎಂದು ಯೋಗಪಟುಗಳಿಗೆ  ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಸಲಹೆ ನೀಡಿದರು.

ಯೋಗವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ  ನರೇಂದ್ರ ಮೋದಿ ಅವರನ್ನ ಪ್ರಶಂಸಿಸಬೇಕು .

ಇದೇ ವೇಳೆ ಮಾತನಾಡಿದ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳು ಯೋಗವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ  ನರೇಂದ್ರ ಮೋದಿ ಅವರನ್ನ ಪ್ರಶಂಸಿಸಬೇಕು. ಆಧುನಿಕ ಆಧ್ಯಾತ್ಮಿಕತೆಗೆ ಯೋಗವು ಅವಶ್ಯಕತೆ ಇದೆ, ತಾಂತ್ರಿಕತೆ ಬೆಳೆದಂತೆಯೂ ಸಹ ಉತ್ತಮ ಅರೋಗ್ಯದಿಂದಿರಲು ಯೋಗ ಅತ್ಯಾವಶ್ಯಕ ಎಂದರು.

ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಯೋಗ ಶಿಕ್ಷಕರ ನೇಮಕ – ಸಚಿವ ಸಾ.ರಾ ಮಹೇಶ್

ಇದೇ ವೇಳೆ ಮಾತನಾಡಿದ ಸಚಿವ ಸಾ.ರಾ ಮಹೇಶ್ , ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಯೋಗ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತೇವೆ. ವಿದೇಶಿಗರನ್ನ ಯೋಗಕ್ಕೆ ಸೆಳೆಯುವ ದೃಷ್ಟಿಯಿಂದ ಈ ಹೊಸ ಕ್ರಮ‌ಕ್ಕೆ ಚಿಂತನೆ. ವಿದೇಶಿಗರಿಗೆ  20ದಿನ ಹಾಗೂ 15ದಿನದ ಕ್ಯಾಂಪ್ ನಡೆಸಲು ಚಿಂತನೆ ಮಾಡಿದ್ದೇವೆ ಎಂದರು.

Key words: serious thought – compulsion – yoga – school –colleges-Minister GT Deve Gowda.