Thursday, September 17, 2026

BDA Apartments

ಕಾವೇರಿ ನೀರಿಗಾಗಿ ಸೆ.29 ರಂದು ಅಖಂಡ ಕರ್ನಾಟಕ ಬಂದ್ – ವಾಟಾಳ್ ನಾಗರಾಜ್ ಘೋಷಣೆ B...
Home Front Page ಕಾವೇರಿ ನೀರಿಗಾಗಿ ಸೆ.29 ರಂದು ಅಖಂಡ ಕರ್ನಾಟಕ ಬಂದ್ – ವಾಟಾಳ್ ನಾಗರಾಜ್ ಘೋಷಣೆ.

ಕಾವೇರಿ ನೀರಿಗಾಗಿ ಸೆ.29 ರಂದು ಅಖಂಡ ಕರ್ನಾಟಕ ಬಂದ್ – ವಾಟಾಳ್ ನಾಗರಾಜ್ ಘೋಷಣೆ.

ಬೆಂಗಳೂರು,ಸೆಪ್ಟಂಬರ್,25,2023(www.justkannada.in): ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಿದ್ದರೂ ಸಹ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಇಂದು ಈ ಕುರಿತು ಸಭೆ ನಡೆಸಿ ಚರ್ಚಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಘೋಷಣೆ ಮಾಡಿದ್ದಾರೆ.ಕಾವೇರಿ ನೀರಿಗಾಗಿ ಸೆ.29 ರಂದು ಅಖಂಡ ಕರ್ನಾಟಕ ಬಂದ್ vatal nagaraj

ಈ ಕುರಿತು ಮಾತನಾಡಿರುವ ಅವರು, ಸೆ.29ರಂದು ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಕಂಪ್ಲೀಟ್ ಬಂದ್ ಆಗಬೇಕು. ರಾಜ್ಯದಲ್ಲಿ ಏನೇ ಸಮಸ್ಯೆ ಬಂದ್ರೂ ಧರಣಿ ಮಾಡುತ್ತೇವೆ ಕರ್ನಾಟಕ ಬಂದ್ ಗೆ ರಾಜ್ಯದ ಜನರು ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

Key words: Sep 29 -Karnataka -bandh for Cauvery water – Vatal Nagaraj