Thursday, September 17, 2026

BDA Apartments

Home Front Page ನಾವು ಜನರ ಹಿತ ಕಾಪಾಡಬೇಕು: ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್.

ನಾವು ಜನರ ಹಿತ ಕಾಪಾಡಬೇಕು: ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಸೆಪ್ಟಂಬರ್,25,2023(www.justkannada.in):  ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಾವು ಜನರ ಹಿತ ಕಾಪಾಡಬೇಕು. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಭಟನೆ ಮಾಡೋಕೆ, ರಾಜ್ಯದ ಹಿತ ಕಾಪಾಡೋಕೆ ಸಹಕಾರ ಕೊಡ್ತೀವಿ. ನಮ್ಮ ನೆಲ, ಜಲ, ಭಾಷೆ ವಿಚಾರದಲ್ಲಿ ಪಕ್ಷಾತೀತ ಹೋರಾಟ ಅಗತ್ಯ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ ಎಂದರು.ನಾವು ಜನರ ಹಿತ ಕಾಪಾಡಬೇಕು dks dks 1

ಹೋರಾಟ ಮಾಡಲಿ ಅದು ಅವರ ಹಕ್ಕು.  ಆದರೆ ಶಾಂತಿ ಕಾಪಾಡಬೇಕು ಹೋರಾಟದಲ್ಲಿ ಭಾಗಿಯಾಗುವ ಪಕ್ಷಗಳು , ಸಂಘಟನೆಗಳಿಗೆ ತೊಂದರೆ ಮಾಡುವುದಿಲ್ಲ. ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಹೋರಾಟ ಮಾಡುತ್ತಿದ್ದೇವೆ. ನಾನು ಒಬ್ಬ ಮಂತ್ರಿಯಾಗಿ ಏನು ಮಾತನಾಡಲು ಆಗುತ್ತಿಲ್ಲ. ನಾವು ಜನರ ಹಿತ ಕಾಪಾಡಬೇಕು. ಕೋರ್ಟ್ ಗೂ ಗೌರವ ಕೊಡಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: cavery dispute-protect –people- interests- DCM- DK Shivakumar.