13 ಲಕ್ಷ ಭಾರತೀಯ ಬ್ಯಾಂಕ್‌ ಗ್ರಾಹಕರ ಡೆಬಿಟ್, ಕ್ರೆಡಿಟ್‌ ಕಾರ್ಡ್‌ ಮಾಹಿತಿ ಮಾರಾಟಕ್ಕಿಟ್ಟ ಡೇಟಾ ಖದೀಮರು !

ಬೆಂಗಳೂರು, ಅಕ್ಟೋಬರ್ 31, 2019 (www.justkannada.in): 13 ಲಕ್ಷ ಭಾರತೀಯ ಬ್ಯಾಂಕ್‌ ಗ್ರಾಹಕರ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಬೆಳಕಿಗೆ ಬಂದಿದೆ.

ಈ ದತ್ತಾಂಶವನ್ನು ಮಾರಾಟಕ್ಕೆ ಇಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಿಂಗಪುರ ಮೂಲಕ ಐಬಿ ಸೆಕ್ಯುರಿಟಿಯ ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ದತ್ತಾಂಶ ಸಂಚಯಕ್ಕೆ ‘INDIA-MIX-NEW-01′(ಇಂಡಿಯಾ-ಮಿಕ್ಸ್‌-ನ್ಯೂ-01) ಎಂಬ ಹೆಸರಿಡಲಾಗಿದೆ.

ದತ್ಥಾಂಶಗಳನ್ನು ಟ್ರಾಕ್-1 ಮತ್ತು ಟ್ರಾಕ್-2 ಎಂಬ ಎರಡು ಸಂಪುಟಗಳಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಇದರಲ್ಲಿ 13 ಲಕ್ಷಕ್ಕೂ ಹೆಚ್ಚು ಮಂದಿಯ ವಹಿವಾಟು ವಿವರಗಳು ಲಭ್ಯ. ಈ ಪೈಕಿ ಶೇ 98ರಷ್ಟು ಕಾರ್ಡ್‌ಗಳು ಭಾರತೀಯ ಬ್ಯಾಂಕ್‌ಗಳಿಗೆ ಸೇರಿವೆ. ಎಂಬುದು ಉಲ್ಲೇಖಾರ್ಹ ಅಂಶ.