ಹುಣಸೂರು ಬೈ ಎಲೆಕ್ಷನ್: ಜಿಟಿ ದೇವೇಗೌಡರು ನಂಗೆ  ಆಶೀರ್ವಾದ ಮಾಡ್ತಾರೆ ಎಂದ ‘ಕೈ’ ಸಂಭಾವ್ಯ ಅಭ್ಯರ್ಥಿ ಮಂಜುನಾಥ್…

ಮೈಸೂರು,ಸೆ,21,2019(www.justkananda.in): ಹುಣಸೂರು ಬೈ ಎಲೆಕ್ಷನ್ ರಂಗೇರಿದ್ದು ಚುನಾವಣೆ ಘೋಷಣೆಯಾಗುವ ಮುನ್ನವೇ, ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಮಂಜುನಾಥ್ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಶಾಸಕ ಹಾಗೂ ‘ಕೈ’ ಸಂಭಾವ್ಯ ಅಭ್ಯರ್ಥಿ ಮಂಜುನಾಥ್,  ಮಾಜಿಸಚಿವ ಜಿ. ಟಿ ದೇವೇಗೌಡರು ನಂಗೆ  ಆಶೀರ್ವಾದ ಮಾಡ್ತಾರೆ. ನನ್ನ  ಗೆಲುವಿನ ಬಗ್ಗೆ  ಸಾರ್ವಜನಿಕವಾಗಿಯೇ ಜಿಟಿಡಿ  ಹೇಳಿದ್ದಾರೆ. ಹುಣಸೂರು ಕ್ಷೇತ್ರದ ಜನರ ನಾಡಿ ಮಿಡಿತ ಜಿಟಿ ದೇವೇಗೌಡರಿಗೆ ಚೆನ್ನಾಗಿ ಗೊತ್ತಿದೆ ಅದಕ್ಕೆ ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ನೀನೇ ಅಭ್ಯರ್ಥಿ ಆಗು,  ಚುನಾಚಣೆಗೆ ಸಿದ್ಧನಾಗು ಎಂದಿದ್ದಾರೆ.. ನಾ ಗೆದ್ದಾಗಲೆಲ್ಲ ಅವರೇ ನಂಗೆ ಆಶೀರ್ವಾದ ಮಾಡಿದ್ದಾರೆ. ಹುಣಸೂರು ಭಾಗದಲ್ಲಿ ಜಿಟಿ ದೇವೇಗೌಡರ  ಹಿಡಿತವಿದೆ,  ಚುನಾವಣೆ ವೇಳೆ ಜಿಟಿ ದೇವೇಗೌಡರನ್ನ ಭೇಟಿ ಮಾಡಿ ಬೆಂಬಲ ಕೋರುತ್ತೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣ ಇದೆ,  ಬಿಜೆಪಿ ಮೇಲೆ ಜನರಿಗೆ ಬೇಸರ ಉಂಟಾಗಿದೆ,  ಉಪ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಇದೆ  ಮಾಜಿ ಶಾಸಕ ಮಂಜುನಾಥ್ ತಿಳಿಸಿದರು.

Key words: Hunsur By election- congress- potential candidate – Manjunath- GT Deve Gowda