Tuesday, October 13, 2026

Dasara Wishes

Happy Dasara
Home Front Page ಲೋಕಸಭೆಯಲ್ಲಿ ಭದ್ರತಾ ವೈಪಲ್ಯ ಹಿನ್ನೆಲೆ: 8 ಸಿಬ್ಬಂದಿಗಳು ಅಮಾನತು.

ಲೋಕಸಭೆಯಲ್ಲಿ ಭದ್ರತಾ ವೈಪಲ್ಯ ಹಿನ್ನೆಲೆ: 8 ಸಿಬ್ಬಂದಿಗಳು ಅಮಾನತು.

ನವದೆಹಲಿ,ಡಿಸೆಂಬರ್,14,2023(www.justkannada.in): ನಿನ್ನೆ ಲೋಕಸಭೆಯಲ್ಲಿ ಭದ್ರತಾ ಲೋಪ ಸಂಬಂಧ 8 ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ.
ಲೋಕಸಭೆ ಕಾರ್ಯಾಲಯ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ಸಂಸತ್ತಿನ ಭಾರಿ ಭದ್ರತಾ ಲೋಪವಾಗಿತ್ತು, ಇಬ್ಬರು ಅಪರಿಚಿತರು ಲೋಕಸಭೆಗೆ ನುಗ್ಗಿ ಅಶ್ರುವಾಯು ಸಿಡಿಸಿದ್ದರು. ಈ ಪ್ರಕರಣ ಸಂಬಂಧ ಈಗಾಗಲೇ ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.
Key words: security breach – Lok Sabha: 8 staff members -suspended.