ಶಾಲಾ-ಕಾಲೇಜು ಆರಂಭಕ್ಕೆ ಚಿಂತನೆ ವಿಚಾರ- ಸರ್ಕಾರಕ್ಕೆ ಸಲಹೆ ಕೊಟ್ಟ ಶಾಸಕ ಜಿ.ಟಿ ದೇವೇಗೌಡ…

ಮೈಸೂರು, ಅಕ್ಟೋಬರ್,3,2020(www.justkannada.in): ಕೊರೋನಾ ನಡುವೆ ಅಕ್ಟೋಬರ್ 15 ರಿಂದ ಶಾಲಾ ಕಾಲೇಜು ಆರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಕುರಿತು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ ದೇವೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.jk-logo-justkannada-logo

ಸದ್ಯಕ್ಕೆ ಶಾಲೆ ತೆರೆಯುವ ವಿಚಾರವನ್ನ ಸರ್ಕಾರ ಕೈಬಿಡಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು. ಕೊರೋನಾ ಬಂದು ಆರು ತಿಂಗಳು ಎಲ್ಲಾ ಬಂದ್ ಆಗಿತ್ತು. ಆಗ ನಾವು ಏನನ್ನು ಕಳೆದುಕೊಂಡಿಲ್ಲ. ಈಗ ಶಾಲೆ ತೆರೆಯಲಿಲ್ಲ ಅಂದರು ನಾವು ಏನು ಕಳೆದುಕೊಳ್ಳಲ್ಲ.school-college-re-open-advised-government-former-minister-gt-deve-gowda

ಒಂದು ವೇಳೆ ಶಾಲೆ ಓಪನ್ ಮಾಡುದ್ರೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ.ಹೀಗಾಗಿ  ಸರ್ಕಾರ ಸದ್ಯಕ್ಕೆ ಶಾಲೆ ತೆರೆಯುವ ವಿಚಾರವನ್ನ ಕೈಬಿಡಬೇಕು ಎಂದು ಜಿ.ಟಿ ದೇವೇಗೌಡ ಸಲಹೆ ನೀಡಿದ್ದಾರೆ.

Key words: School-College –re open-advised – government-former minister-GT Deve Gowda