ಶಾಲಾ ವಾಹನ ಪಲ್ಟಿಯಾಗಿ 20 ಮಕ್ಕಳಿಗೆ ಗಾಯ.

ರಾಯಚೂರು,ನವೆಂಬರ್,18,2022(www.justkannada.in): ಶಾಲಾ ವಾಹನ ಪಲ್ಟಿಯಾಗಿ 20 ಮಕ್ಕಳಿಗೆ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಮಸ್ಕಿ ತಾಲ್ಲೂಕಿನ ಕುಣೆಕೆಲ್ಲೂರಿನಲ್ಲಿ ಈ ಘಟನೆ ನಡೆದಿದೆ.  ಕುಣೆ ಕೆಲ್ಲೂರಿನಿಂದ ಸಂತೆಕೆಲ್ಲೂರಿಗೆ ತೆರಳುತ್ತಿದ್ದ ವೇಳೆ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.  ವಾಹನದಲ್ಲಿದ್ದ 20 ಮಕ್ಕಳಿಗೆ ಗಾಯಗಳಾಗಿದೆ.

ಗಾಯಾಳು ಮಕ್ಕಳನ್ನ ಲಿಂಗಸೂಗೂರು, ರಾಯಚೂರು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,  ಅಪಘಾತ ಸ್ಥಳಕ್ಕೆ ಮಸ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Key words: school-bus-overturn-children-injury