2020ಕ್ಕೆ ‘ಮೈ ನೇಮ್ ಇಸ್ ಸಿದ್ದೇಗೌಡ’ನಿಗೆ ಸತೀಶ್ ನಿನಾಸಂ ಆ್ಯಕ್ಸನ್ ಕಟ್ !

ಬೆಂಗಳೂರು, ಅಕ್ಟೋಬರ್ 5, 2019 (www.justkannada.in): ಸತೀಶ್ ನೀನಾಸಂ ಚಿತ್ರ ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಚಿತ್ರ  ನೋಡಲು  ಅವರ ಅಭಿಮಾನಿಗಳು 2020ರವರೆಗೆ ಕಾಯಬೇಕು !

2019ರಲ್ಲಿ ಒಪ್ಪಿಕೊಂಡಿರುವ, ‘ಬ್ರಹ್ಮಚಾರಿ’, ‘ಗೋದ್ರಾ’, ‘ಪರಿಮಳ ಲಾಡ್ಜ್’, ಮತ್ತೊಂದು ಹೆಸರಿಡದ ಚಿತ್ರ, ಇವುಗಳನ್ನು ಮುಗಿಸಿ , ರಿಲೀಸ್ ಮಾಡುವ ಜವಾಬ್ದಾರಿಯಿದೆ. ಹಾಗಾಗಿ ‘ಮೈ ನೇಮ್ ಇಸ್ ಸಿದ್ದೇಗೌಡ’ ನಿರ್ದೇಶನದ ಚಿತ್ರ ತಡವಾಗಲಿದೆ ಎಂದು ಸತೀಶ್ ಹೇಳಿದ್ದಾರೆ.

ಅಂದಹಾಗೆ ಈ ಚಿತ್ರವು ‘ಅಯೋಗ್ಯ’ ಚಿತ್ರದ ಸಿಕ್ವೇಲ್ ಎಂದು ಹೇಳಲಾಗುತ್ತಿದ್ದು, ರೊಮ್ಯಾಂಟಿಕ್ ಕಾಮಿಡಿ ಜಾನರ್ ಕಥೆಯನ್ನು ಒಳಗೊಂಡಿದೆ.