Tuesday, September 15, 2026

BDA Apartments

ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ BDA JK_Adv BDA Adv
Home Front Page ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ

ಹೆಡಿಯಾಲ ಎಸಿಎಫ್‌ ಆಗಿ ಎ.ವಿ.ಸತೀಶ್‌ ನೇಮಕ

AV Sathish appointed as Hediyala ACF

 

ಮೈಸೂರು, ಜು,16,2024: (www.justkannada.in news) ಕರ್ನಾಟಕ ಅರಣ್ಯ ಇಲಾಖೆ ಹಲವು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ವರ್ಗ ಮಾಡಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಂಜನಗೂಡು ತಾಲ್ಲೂಕು ಹೆಡಿಯಾಲ ಉಪವಿಭಾಗದ ಎಸಿಎಫ್‌ ಆಗಿ ಹಿರಿಯ ಅಧಿಕಾರಿ ಎ.ವಿ.ಸತೀಶ್‌ ಅವರನ್ನು ನೇಮಕ ಮಾಡಲಾಗಿದೆ.

ಮೈಸೂರು ವೃತ್ತದ ಅರಣ್ಯ ಕಾರ್ಯಯೋಜನೆ ಹಾಗೂ ಮೋಜಣಿ ವಿಭಾಗದ ಎಸಿಎಫ್‌ ಆಗಿ ಸತೀಶ್‌ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸತೀಶ್‌, ಶಿವಮೊಗ್ಗ, ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾಗರಹೊಳೆಯ ಅಂತರಸಂತೆ ಹಾಗೂ ಡಿಬಿಕುಪ್ಪೆಯ ಆರ್‌ಎಫ್‌ಒ ಆಗಿದ್ದರು.

ಮೈಸೂರು ಮೃಗಾಲಯದಲ್ಲೂ ಆರ್‌ಎಫ್‌ಗಿ ಆಗಿ ಸೇವೆ ಸಲ್ಲಿಸಿ ನಂತರ ನಾಗರಹೊಳೆಯ ಹುಣಸೂರು ಉಪವಿಭಾಗದ ಎಸಿಎಫ್‌ಆಗಿ ಸತೀಶ್‌ ಅವರು ಕಾರ್ಯನಿರ್ವಹಿಸಿದ್ದಾರೆ.

key words: AV Sathish, appointed as, Hediyala, ACF