Tuesday, September 29, 2026

BDA Apartments

ಹಿರಿಯ ನಟ ಸರಿಗಮ ವಿಜಿ(76) ಇನ್ನಿಲ್ಲ BDA JK_Adv BDA Adv
Home Cinema ಹಿರಿಯ ನಟ ಸರಿಗಮ ವಿಜಿ(76) ಇನ್ನಿಲ್ಲ

ಹಿರಿಯ ನಟ ಸರಿಗಮ ವಿಜಿ(76) ಇನ್ನಿಲ್ಲ

ಬೆಂಗಳೂರು,ಜನವರಿ,15,2025 (www.justkannada.in): ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ(76) ಅವರು ನಿಧನರಾಗಿದ್ದಾರೆ.

ಸರಿಗಮ ವಿಜಿ ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರಿಗೆ ಇಬ್ಬರು ಮಕ್ಕಳಿದ್ದರು. ನಾಳೆ (ಜನವರಿ 16) ಚಾಮರಾಜಪೇಟೆಯ ಟಿ.ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

ವಿಜಿ ಅವರದ್ದು ಬಲು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಕೊಟ್ಟಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಕೆಲವೆಡೆ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಸರಿಗಮ ವಿಜಿ ಅವರು ನಟಿಸಿದ್ದ ಚೊಚ್ಚಲ ಚಿತ್ರ ಬೆಳವಳದ ಮಡಿಲಲ್ಲಿ, ಅವರು ನಟಿಸಿದ್ದ ಕೊನೆಯ ಚಿತ್ರ  ಡಕೋಟಾ ಪಿಚ್ಚರ್.

Key words: Veteran actor, Sarigama Viji,  no more