ಬೆಂಗಳೂರಲ್ಲಿ ನೆರವೇರಿದ ‘ಸಪ್ತ ಸಾಗರದಾಚೆ ಎಲ್ಲೋ’ ಮುಹೂರ್ತ!

ಬೆಂಗಳೂರು, ಮಾರ್ಚ್ 13, 2021 (www.justkannada.in): 

ಬೆಂಗಳೂರಿನ ದೇವಾಲಯವೊಂದರಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮುಹೂರ್ತ ಕಾರ್ಯಕ್ರಮ ಸರಳವಾಗಿ ನೆರವೇರಿದೆ.

ಅಂದಹಾಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ಬಳಿಕ ನಟಿಸುತ್ತಿರುವ ಸಪ್ತ ಸಾಗರದಾಚೆ ಅನೌನ್ಸ್ ಮಾಡಿ ಸಾಕಷ್ಟು ದಿನಗಳು ಕಳೆದಿದ್ದವು. ಇದೀಗ ಸದ್ದಿಲ್ಲದೇ ಮುಹೂರ್ತ ನೆರವೇರಿದೆ.

ಮುಹೂರ್ತ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು. ಅಂದಹಾಗೆ ಶಿವರಾತ್ರಿಯಂದು ಸಿನಿಮಾದ ಮತ್ತೊಂದು ಪೋಸ್ಟರ್ ಒಂದು ಬಿಡುಗಡೆಯಾಗಿತ್ತು.

ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿ, ಹೇಮಂತ್ ರಾವ್ ಡೈರೆಕ್ಟರ್.