ಹೆಬ್ಬಾಳ ಕೆರೆಯಲ್ಲಿ ಭಾರಿ ಗಾತ್ರದ ಮೀನುಗಳ ಸಾವು…

ಮೈಸೂರು,ಮಾರ್ಚ್,13,2021(www.justkannada.in): ಮೈಸೂರಿನ ರಿಂಗ್ ರಸ್ತೆಯ ಹೊರಭಾಗದಲ್ಲಿರುವ ಹೆಬ್ಬಾಳ ಕೆರೆಯಲ್ಲಿ ಭಾರಿ ಗಾತ್ರದ ಮೀನುಗಳು ಸಾವನ್ನಪ್ಪಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.jk

ಇತ್ತೀಚೆಗಷ್ಟೇ ಹೆಬ್ಬಾಳ ಕೆರೆ ಅಭಿವೃದ್ಧಿ ಹೊಂದಿತ್ತು. ಸದ್ಯ ಕೆರೆ ಅಭಿವೃದ್ಧಿ ಪಡಿಸಲು ಇನ್ಫೋಸಿಸ್ ನ ಕೆರೆ ನಿರ್ವಹಣಾ ತಂಡ ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಈ ನಡುವೆ ನಿನ್ನೆಯಷ್ಟೇ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಕೆರೆ ವೀಕ್ಷಣೆ ಮಾಡಿದ್ದರು.death-large-fish-hebbal-lake-mysore

ಈ ವೇಳೇ ಕೆರೆಯಲ್ಲಿ ಮೀನುಗಳನ್ನ ಬಿಟ್ಟಿರುವ ಬಗ್ಗೆ  ಸಚಿವರಿಗೆ ಇನ್ಫೋಸಿಸ್ ಸಿಬ್ಬಂದಿ ಮಾಹಿತಿ ನೀಡಿದ್ದರು. ಇದೀಗ ಕೆರೆಯ ದಡದಲ್ಲಿ ಭಾರಿ ಗಾತ್ರದ ಮೀನುಗಳು ಸತ್ತು ಬಿದ್ದಿದ್ದು, ಮೀನುಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೀನುಗಳ ಸಾವಿನಿಂದ ವಾಯುವಿಹಾರಿಗಳು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ನೀರನ್ನು ಪರೀಕ್ಷೆಗೆ ಒಳಪಡಿಸುವಂತೆ ಅಗ್ರಹಿಸಿದ್ದಾರೆ.

Key words: Death – large fish – Hebbal Lake-mysore