ಗುಜರಾತ್ ನಲ್ಲಿ ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯ ಬಂಧನ: ರಾಜ್ಯಕ್ಕೆ ಕರೆತರುತ್ತಿರುವ ಪೊಲೀಸರು.

ಬೆಂಗಳೂರು,13,2023(www.justkannada.in):  ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಮಂಜುನಾಥ್ ಅಲಿಯಾಸ್ ‘ಸ್ಯಾಂಟ್ರೋ ರವಿಯನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್ ನಲ್ಲಿ ತಲೆಮರಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಪೊಲೀಸರು ಬಂಧಿಸಿದ್ದು ರಾಜ್ಯಕ್ಕೆ ಕರೆತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಸ್ಯಾಂಟ್ರೋ ರವಿಯ ಮೇಲೆ ವೇಶ್ಯಾವಾಟಿಕೆ ಟ್ರಾನ್ಸ್ ಫರ್ ದಂಧೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿದ್ದು, ಈತನ ಬಂಧನಕ್ಕಾಗಿ ನಾಲ್ವರು ಎಸ್ಪಿಗಳ ವಿಶೇಷ ತಂಡ ರಚಿಸಲಾಗಿತ್ತು.

ರಾಮನಗರ ,ಮಂಡ್ಯ ಮೈಸೂರಿನಲ್ಲಿ ಸಂಚರಿಸಿ ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ತಲೆಮರಿಸಿಕೊಂಡಿದ್ದ. 11 ದಿನಗಳಿಂದ ಪೊಲೀಸರು ಈತನಿಗಾಗಿ ಹುಡಕಾಟ ನಡೆಸಿದ್ದರು.

Key words: Santro Ravi- arrest – Gujarat- Police