ಕೋಲಾರ,ಸೆಪ್ಟಂಬರ್,10,2025 (www.justkannada.in): ಮಂಡ್ಯ ಜಿಲ್ಲೆಯ ಮದ್ದೂರು ಗಲಭೆ ಸಂಬಂಧ ಇದೀಗ ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಮಾಡಲಾಗುತ್ತಿದ್ದು ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.
ಈ ವಿಚಾರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ ಬಿಜೆಪಿ ವಿರುದ್ದ ಕಿಡಿಕಾರಿದ ಕಾರ್ಮಿಕ ಸಚಿವ ಸಂತೋಷ ಲಾರ್ಡ್, ಹಿಂದು ಮುಸ್ಲಿಂ ಗಲಾಟೆ ಬಿಟ್ಟು ಬಿಜೆಪಿ ಬೇರೆ ಏನು ಮಾಡುತ್ತಿಲ್ಲ ಬಿಜೆಪಿ ನಾಯಕರು ಮಕ್ಕಳು ಯಾವ ಪ್ರತಿಭಟನೆಗೆ ಬಂದಿದ್ದಾರೆ ಹೇಳಿ ಎಂದು ವಾಗ್ದಾಳಿ ನಡೆಸಿದರು.
ಕಲ್ಲುತೂರಾಟ ಮಾಡಿದವರಿಗೆ ಕಾನೂನಿನ ಅಡಿ ಶಿಕ್ಷೆ ಆಗಬೇಕು. ಇಂದು ಅವರು ಮಾತ್ರ ಅವರ ಆಸ್ತಿಗಳನ್ನು ಬಡವರಿಗೆ ಕೊಡಿ. ಹಿಂದೂ ಎನ್ನುವವರು ಮೊದಲು ಅಂತರ್ಜಾತಿ ವಿವಾಹ ಮಾಡಿಸಿ ಹಿಂದೂ ಎನ್ನುವವರು ಮಾತ್ರ ಅವರ ಆಸ್ತಿಯನ್ನ ಬಡವರಿಗೆ ನೀಡಲಿ. ಶಕ್ತಿಪೀಠಗಳು ಹೆಚ್ಚಾಗಿ ಮಾಡಿರುವುದು ನಾವೇ ಎಂದು ಬಿಜೆಪಿ ವಿರುದ್ಧ ಸಂತೋಷ್ ಲಾಡ್ ಹರಿಹಾಯ್ದರು.
Key words: BJP, Hindu-Muslim, riots, Minister, Santosh Lad